ಚಿಕ್ಕೋಡಿ: ಗಾಂಧಿ ಜಯಂತಿ ದಿನದಂದೇ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅಧಿಕಾರಿ ಮೇಲೆ ಗುಂಡಾಗಿರಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ನನ್ನ ಮಾತು ಕೇಳದಿದ್ದರೆ ನೀನೇನೂ ಕೀಳೋಕೆ ಇಲ್ಲಿ ಇರ್ತಿಯಾ ಎಂದು ದುರ್ಯೋಧನ ಐಹೊಳೆ ರಾಯಭಾಗ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ನೇರವಾಗಿ ಧಮ್ಕಿ ಹಾಕಿದ್ದಾರೆ.
ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಅಧಿಕಾರಿ ಮೇಲೆ ಶಾಸಕರು ದರ್ಪ ತೋರುವುದರ ಜೊತೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ನೀವು ಹಣ ತಿನ್ನಲಿ ಬಿಡಲಿ, ನೀವು ಹಣ ತಿಂದಿದ್ದೀರಿ ಎಂದು ನಾನು ಜಿಲ್ಲಾಧಿಕಾರಿಗೆ ನಾನು ದೂರು ನೀಡುತ್ತೇನೆ ಎಂದು ಹೇಳಿದ್ದಲ್ಲೇ ಜನರ ನಡುವೆ ಡಿಪೋ ಮ್ಯಾನೇಜರ್ ಎಆರ್ ಚಬ್ಬಿ ಅವರಿಗೆ ಶಾಸಕ ದುರ್ಯೋಧನ ಹೊಡೆಯಲು ಯತ್ನಿಸಿದ್ದಾರೆ.
ಶಾಸಕರ ಅವತಾರ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ತಬ್ಬಿಬ್ಬು ಆಗಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸದೇ ಇದ್ದಿದ್ದಕ್ಕೆ ನಾವು ಕಸ ಹೊಡೆಯಲು ಬಂದರೆ ನೀವು ಆರಾಮಾಗಿ ಬನ್ನಿ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv