ವಿಜಯಪುರ: ಹಿಜಾಬ್ ವಿವಾದವು ಕಾಂಗ್ರೆಸ್‍ನ ಗಿಮಿಕ್ ಆಗಿದ್ದು, ಇದೆಲ್ಲವನ್ನು ಮಾಡಿಸುತ್ತಿರುವುದೇ ಕೈ ಪಕ್ಷ ಎಂದು ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವಾಗ್ದಾಳಿ ನಡೆಸಿದರು.
Advertisement
ನಗರದ ಇಂಚಗೇರಿ ಗ್ರಾಮದಲ್ಲಿ ಹಿಜಾಬ್ ವಿವಾದದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಈ ತಂತ್ರ ಯಾವತ್ತೂ ಫಲಿಸುವುದಿಲ್ಲ. ಕಾಂಗ್ರೆಸ್ ಒಡೆದು ಮೂರು ಹೋಳಾಗಿದೆ. ಹಿಜಾಬ್ ವಿವಾದದ ಮೂಲಕ ಮುಂದಿನ ಚುನಾವಣೆಯಲ್ಲಿ ಸೀಟ್ ಬರಬಹುದು ಅನ್ನುವ ಲೆಕ್ಕಾಚಾರ ಕಾಂಗ್ರೆಸ್ ನದ್ದಾಗಿದೆ. ಜನರು ಜಾಗೃತರಾಗಿದ್ದಾರೆ, ಅದು ಸಾಧ್ಯವಾಗಲ್ಲ ಎಂದರು. ಇದನ್ನೂ ಓದಿ: ಸಮಾಜ ಒಡೆಯುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರೊಫೆಸರ್‌ಗಳು: ಬಿ.ಸಿ ನಾಗೇಶ್ ತಿರುಗೇಟು
Advertisement
Advertisement
ಕಾಂಗ್ರೆಸ್‍ನಲ್ಲಿ ಮೂರು ಗುಂಪುಗಳಿವೆ. ಹೀಗಾಗಿ ಕೈ ನಾಯಕರು ನೆಲೆ ಕಂಡುಕೊಳ್ಳಲು ಈ ತಂತ್ರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಹೀಗೆ ಮೂರು ಗುಂಪುಗಳಾಗಿವೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಗಿಮಿಕ್ ವರ್ಕೌಟ್ ನಡೆಯುವುದಿಲ್ಲ. ಹಿಜಾಬ್‍ನಿಂದ ಕೈ ಪಕ್ಷಕ್ಕೆ ಹೊಡೆತ ಬೀಳಲಿದೆ. ಬಿಜೆಪಿಗೆ ಯಾವುದೇ ಹಿನ್ನೆಡೆ ಆಗುವದಿಲ್ಲ. ಇನ್ನೂ ಸಿಎಂ ಕುರ್ಚಿಗಾಗಿ ಅವರಲ್ಲೇ ಕಚ್ಚಾಟ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಏನೂ ಉಳಿದಿಲ್ಲ. ಅವರ ಶಾಸಕರನ್ನೇ ಸಿದ್ದರಾಮಯ್ಯ ಬಿಟ್ಟು ಕುಳಿತಿದ್ದಾರೆ. ಇದನ್ನೂ ಓದಿ: ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ
Advertisement
ಅವರ ಶಾಸಕರನ್ನೇ ಅವರಿಗೆ ಸಂಬಾಳಿಸೋಕೆ ಆಗಿಲ್ಲ. ಕಾಂಗ್ರೆಸ್‍ನಿಂದ ಬೇಸತ್ತು ಬಂದವರು ತಿರುಗಿ ಮತ್ತೆ ಯಾಕೆ ಆ ಪಕ್ಷಕ್ಕೆ ವಾಪಸ್ ಹೋಗುತ್ತಾರೆ. ಇದೆಲ್ಲಾ ಕೇವಲ ತಂತ್ರಗಾರಿಕೆ ಅಷ್ಟೇ. 2023ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಗ್ಯಾರಂಟಿ ಅಧಿಕಾರಕ್ಕೆ ಬರಲಿದೆ. 130ಕ್ಕೂ ಅಧಿಕ ಸೀಟ್ ಮೂಲಕ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.