ಶಿವಮೊಗ್ಗ: ಬೋಟಿಂಗ್ ಉದ್ಘಾಟನೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ತಲೆಗೆ ಪೆಟ್ಟು ಬಿದ್ದಿದೆ.
ಶಿವಮೊಗ್ಗದ ಸಕ್ರೆಬೈಲಿನಲ್ಲಿ ನಡೆದ ಈ ಘಟನೆ ನಡೆದಿದ್ದು, ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್ ವ್ಯವಸ್ಥೆ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಿ.ವೈ. ರಾಘವೇಂದ್ರ ಅವರು ಬಂದಿದ್ದರು. ಇದನ್ನೂ ಓದಿ: ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ- ಸಿದ್ದು ಆಪ್ತರಿಗೆ ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್
ನಂತರ ಬೋಟ್ ಉದ್ಘಾಟನೆ ಮಾಡಿ ಬೋಟ್‍ನಿಂದ ಕೆಳಗೆ ಇಳಿಯುತ್ತಿದ್ದಾಗ ಸ್ಕ್ರೂ ತಗುಲಿದ ಪರಿಣಾಮ ಬಿ.ವೈ. ರಾಘವೇಂದ್ರ ಅವರ ತಲೆಗೆ ಗಾಯವಾಗಿದೆ. ಹೀಗಾಗಿ ಬಿ.ವೈ. ರಾಘವೇಂದ್ರ ಅವರು ಕೂಡಲೇ ಪ್ರಾಥಮಿಕ ಚಿಕಿತ್ಸೆ ಪಡೆದರು. ಇದನ್ನೂ ಓದಿ: ತಮ್ಮನ ಕಿರುಕುಳ ತಾಳಲಾರದೇ ಅಣ್ಣ ಆತ್ಮಹತ್ಯೆಗೆ ಶರಣು