ಚುನಾವಣೆ ಪ್ರಚಾರ ವೇಳೆ ‘ಡೆವಿಲ್’ ಡೈಲಾಗ್ ಹೊಡೆದ ದರ್ಶನ್

Public TV
1 Min Read
Darshan 9

ನಿನ್ನೆಯಷ್ಟೇ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರು ನಟ ದರ್ಶನ್ (Darshan). ಪ್ರಚಾರದ ವೇಳೆ ಹಲವು ಘಟನೆಗಳಿಗೆ ಸಾಕ್ಷಿಯಾದರು ನಟ.  ಪ್ರಚಾರದುದ್ದಕ್ಕೂ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.

Darshan 10

ನೆಚ್ಚಿನ ನಟನನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಬೃಹತ್ ಗಾತ್ರದ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ನಟನನ್ನು ಕಣ್ತುಂಬಿಕೊಂಡು ಆನಂದಿಸಿದರು. ಜೈ ಡಿ ಬಾಸ್ ಎಂದು ಘೋಷಣೆ ಕೂಗಿದರು. ಸಣ್ಣ ವಯಸ್ಸಿನ ಇಬ್ಬರು ಅಭಿಮಾನಿಗಳು ಬಂದು ದರ್ಶನ್ ಪಾದಕ್ಕೆ ಹಣೆ ಹಚ್ಚಿದರು.

 

ಈ ಎಲ್ಲ ಘಟನೆಗಳು ಮುಗಿದ ನಂತರ, ನಿಮ್ಮನ್ನ ನಾನು ನಿರಾಸೆಗೊಳಿಸಲಾರೆ. ನೀವು ಡೈಲಾಗ್ (Dialogue) ಗಾಗಿ ಕಾಯುತ್ತಿದ್ದೀರಿ ಎಂದು ಡೆವಿಲ್ (Devil) ಚಿತ್ರದ ಒಂದು ಡೈಲಾಗ್ ಹೊಡೆದಿದ್ದಾರೆ. ಆ ಸಂಭಾಷಣೆ ಕೇಳಿ ಅಭಿಮಾನಿಗಳು ಸಿಳ್ಳೆ ಹಾಕಿ ಆನಂದಿಸಿದ್ದಾರೆ.

Share This Article