ಯಾದಗಿರಿ: ಬಿಜೆಪಿ (BJP) ಅವಧಿಯಲ್ಲಿ ಬಿಬಿಎಂಪಿಯಲ್ಲಿ (BBMP) 118 ಕೋಟಿ ರೂ. ಬೋಗಸ್ ಬಿಲ್ ಆಗಿದೆ. ಕಾಮಗಾರಿ ಮಾಡದೆ ಬಿಲ್ ಪಡೆದಿದ್ದಾರೆ. ಇದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಕಂಡುಹಿಡಿದಿದ್ದಾರೆ ಎಂದು ಸಚಿವ ದರ್ಶನಾಪೂರ (Darshanapur) ಹೇಳಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಳಿಸಿದವರಿಗೆ ಬಿಲ್ ಮಾಡುವುದಕ್ಕೆ ಯಾವುದೇ ಅಡೆತಡೆ ಇಲ್ಲ. ಈಗಾಗಲೇ ಒಳ್ಳೆಯ ಕೆಲಸ ಮಾಡಿದವರು ಹೆದರುವ ಅಗತ್ಯವಿಲ್ಲ. ಬೋಗಸ್ ಬಿಲ್‍ಗಳಿಗೂ ಪೇಮೆಂಟ್ ಮಾಡಬೇಕಾ? ಉಳಿದವರಿಗೆ ಬಿಲ್ ಕೊಡುವುದಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಕಳಪೆ ಕಾಮಗಾರಿ ನಡೆದಿರುವುದನ್ನು ಪರಿಶೀಲಿಸಿ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಈಗಾಗಲೇ ಎಸ್‍ಐಟಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯುವ ವೇಳೆ ಬಿಲ್ ಕೊಡುವುದು ಹೇಗೆ ಎಂದಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ಅಪ್ಪಿಕೊಳ್ಳುವುದು, ಸ್ಪರ್ಶಿಸುವುದು ಅಪರಾಧವಲ್ಲ – ಬ್ರಿಜ್ ಭೂಷಣ್ ಸಮರ್ಥನೆ
Advertisement
Advertisement
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಪತ್ರ ಬರೆದು ಆತ್ಮಹತ್ಯೆ ಮಾಡ್ಕೊಂಡಿದ್ದ. ಗುತ್ತಿಗೆದಾರ ಸಂಘದ ಅದ್ಯಕ್ಷ ಗುತ್ತಿಗೆದಾರರ ಪರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಿಬಿಎಂಪಿ ಕೆಲಸ ನಡೆಯದೇ ಸಾಕಷ್ಟು ಬಿಲ್ ಪಡೆದಿದ್ದಾರೆ. ಈಗಾಗಲೇ 118 ಕೋಟಿ ಬೋಗಸ್ ಬಿಲ್ ಕಂಡು ಹಿಡಿದಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಜೆಪಿಯವರು ಒಂದೊಂದು ರೀತಿ ಹೇಳುತ್ತಿದ್ದಾರೆ. ಗ್ಯಾರಂಟಿ ಯಾವಾಗ ಜಾರಿ ಮಾಡುತ್ತೀರಿ ಎಂದಿದ್ದರು. ಈಗ ಜಾರಿಯಾಗಿದೆ ನೋಡಿ ಎಂದಿದ್ದಾರೆ.
Advertisement
Advertisement
ಕೃಷಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೃಷಿ ಇಲಾಖೆಯಲ್ಲಿ ವಗಾವಣೆ ಎಷ್ಟು ಆಗಿವೆ? ಕೇವಲ ಐದಾರು ಪೋಸ್ಟ್ ವರ್ಗಾವಣೆ ಆಗಿದ್ದಾವೆ. ರಾಜ್ಯಪಾಲರಿಗೆ ಕೊಟ್ಟಿರುವ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಿ. ಬಿ.ಆರ್ ಪಾಟೀಲ್ ಪತ್ರ ನಕಲಿ ಆಗಿತ್ತಲ್ಲವೇ? ಬಿಜೆಪಿಯಲ್ಲಿ ಸುಳ್ಳಿನ ಸೋಶಿಯಲ್ ಮೀಡಿಯಾದ ಪ್ಯಾಕ್ಟರಿಗಳಿವೆ. ನಾವು ರಾಜ್ಯದ ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ. ಕೇಂದ್ರದಲ್ಲಿ ಬಿಜೆಪಿಯೇ ಇದೇ ಬೇಕಾದರೆ ತನಿಖೆ ಮಾಡಲಿ. ಕುಮಾರಸ್ವಾಮಿಯವರು ಪೆನ್‍ಡ್ರೈವ್ ತೋರಿಸಿದ್ದಾರೆ ಆದರೆ ಕೊಡಲಿಲ್ಲ. ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರನಾ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ
Web Stories