ಬೆಂಗಳೂರು: ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ವೇಳೆ ಅಭಿಮಾನಿಗಳು ಅತಿಕ್ರಮ ಪ್ರವೇಶ ಮಾಡಿದ್ದ ಹಿನ್ನೆಲೆ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಈ ಕುರಿತು ಕೆಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾತನಾಡಿದ್ದು, ಭಾನುವಾರ ರಾತ್ರಿ 9:38 ರ ವೇಳೆಗೆ ಗ್ರಿಲ್ ಹಾರಿ ನಾಲ್ವರು ಮ್ಯಾಚ್ ನಡೆಯುತ್ತಿರಬೇಕಾದರೆ ಮೈದಾನದ ಒಳಗೆ ಪ್ರವೇಶ ಮಾಡಿದ್ರು. ತಕ್ಷಣ ನಮ್ಮ ಪೊಲೀಸರು, ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಅವರ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅರೆಸ್ಟ್ ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಐಪಿಎಲ್ 10 ತಂಡಗಳ ಪೈಕಿ 2 ತಂಡಕ್ಕೆ ಕನ್ನಡಿಗರ ನಾಯಕತ್ವ – ಮೂವರು ನೂತನ ನಾಯಕರ ಎಂಟ್ರಿ
Advertisement
#ViratKohli fans never be comfortable without their own approval.???????? #NammaBengaluru #INDvsSL #PinkBallTest #Bengaluru #Karnataka pic.twitter.com/F6Q5ZkuVw3
— AVaN (@ezybriz) March 14, 2022
Advertisement
ಮೈದಾನದ ಒಳಗೆ ಪ್ರವೇಶ ಮಾಡಿದ ನಾಲ್ವರಿಗೂ ಪರಿಚಯವಿರಲಿಲ್ಲ. ಒಬ್ಬ ಒಳ ಹೋಗಿದ್ದನ್ನು ನೋಡಿ ಇತರರು ಕೂಡ ಒಳಗೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
Advertisement
ಬೆಂಗಳೂರು ಪೊಲೀಸರ ವಿರುದ್ಧ ಬಿಸಿಸಿಐ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಆ ರೀತಿಯ ಯಾವುದೇ ಮಾಹಿತಿ ಕೇಳಿಲ್ಲ. ಈ ಸಂಬಂಧ ಇಲಾಖೆ ಮಟ್ಟದಲ್ಲಿ ತನಿಖೆಗೆ ಅದೇಶ ನೀಡಲಾಗಿದೆ. ಪೊಲೀಸರ ಕರ್ತವ್ಯ ಲೋಪ ಕಂಡುಬಂದ್ರೆ ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Advertisement
Moments Of The Day ????????????.#ViratKohli #INDvSL #INDvsSL #PinkBallTest pic.twitter.com/4mPcfS0ZyJ
— virat_kohli_18_club (@KohliSensation) March 13, 2022
ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ವೇಳೆ ನಾಲ್ವರು ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ನೋಡಿ ಫುಲ್ ಖುಷ್ ಆಗಿದ್ದರು. ಪಂದ್ಯ ನಡೆಯುತ್ತಿದ್ದಂತೆ ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು ವಿರಾಟ್ ಕೊಹ್ಲಿ ಬಳಿ ತೆರಳಿ ಸೆಲ್ಫಿ ತೆಗೆಸಿಕೊಂಡಿದ್ದರು. ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರ ವಿರುದ್ಧ ಬಿಸಿಸಿಐ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: RCB ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ