ಉಡುಪಿ: ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸುನೀಲ್ ಚಾತ್ರ ಸಾವನ್ನಪ್ಪಿದ್ದಾರೆ. ವ್ಯವಹಾರ ಸಂಬಂಧಿ ಪ್ರವಾಸದಲ್ಲಿದ್ದ ಸುನೀಲ್ ಈ ಅವಘಡ ಸಂಭವಿಸಿದೆ.
ತಮಿಳುನಾಡಿಗೆ ಪಜೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಧ್ಯಾಹ್ನ ಸುಮಾರು ಮೂರು ಗಂಟೆ ವೇಳೆ ಈ ಘಟನೆ ನಡೆದಿದೆ. ಚಾಲಕ ಕೂಡ ಗಾಯಗೊಂಡಿದ್ದಾನೆ. ಸುನಿಲ್ ಛಾತ್ರ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಆಡಳಿತ ಪಾಲುದಾರರಾಗಿದ್ದು ತಂದೆಯ ಮಾಲೀಕತ್ವದ ಟ್ರಾವೆಲ್ಸ್ ಅನ್ನು ಸಹೋದರನೊಂದಿಗೆ ನೋಡಿಕೊಳ್ಳುತ್ತಿದ್ದರು.
ಮೃತ ಸುನೀಲ್ ಛಾತ್ರರು ವಿವಾಹಿತರಾಗಿದ್ದು, ಅವರ ಮೃತದೇಹ ಭಾನುವಾರ ಕುಂದಾಪುರ ತಲುಪಲಿದೆ. ಅಂತಾರಾಜ್ಯ ಮಟ್ಟದಲ್ಲಿಯೂ ಬಸ್ ಸಂಪರ್ಕ ಸೇವೆ ಕಲ್ಪಿಸಿದ್ದ ಛಾತ್ರ ಕುಟುಂಬ, ಕುಂದಾಪುರದ ಕುಗ್ರಾಮಗಳಿಗೂ ನಿತ್ಯ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿತ್ತು.
ಸಾರ್ವಜನಿಕ ಸೇವೆಯ ವಿಷಯದಲ್ಲಿ ಶ್ರೀ ದುರ್ಗಾಂಬಾ ಜನಮನ್ನಣೆಗೆ ಪಾತ್ರವಾಗಿತ್ತು. ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಶ್ರೀ ದುರ್ಗಾಂಬಾ ಬಸ್ಸುಗಳು ಓಡಾಡುತ್ತಿತ್ತು. ಲಾಭಕ್ಕಿಂತ ಹೆಚ್ಚು ಜನಸೇವೆಗೆ ಶ್ರೀ ದುರ್ಗಾಂಬಾ ಒತ್ತುಕೊಡುತ್ತಿತ್ತು ಎಂದು ಪ್ರಯಾಣಿಕ ರಾಘು ಕುಂದಾಪುರ ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv