ಹಾವೇರಿ: ಮಾರ್ಕೆಟ್‍ಗೆ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ ತರಕಾರಿ, ಹಣ್ಣುಗಳು ಹಾಗೂ ದಿನಸಿ ಅಂಗಡಿಗಳಲ್ಲಿನ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ದುರ್ಗಾ ಮಾರ್ಕೆಟ್‍ನಲ್ಲಿ ನಡೆದಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಹರಿಯಿತು ನೆತ್ತರು – ಸ್ನೇಹಿತರಿಂದಲೇ ಯುವಕನ ಲೈವ್ ಮರ್ಡರ್
Advertisement
ಮಾರುಕಟ್ಟೆಯಲ್ಲಿರುವ 200 ಅಧಿಕ ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ದುಷ್ಕರ್ಮಿಗಳು ತಡರಾತ್ರಿ ಅಂಗಡಿಗಳಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಣ್ಣ ವ್ಯಾಪಾರಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಬಾಲಕಿಯರಿಗೂ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು
Advertisement
Advertisement
200ಕ್ಕೂ ಅಧಿಕ ವ್ಯಾಪಾರಸ್ಥರಿಂದ ಮಾರ್ಕೆಟ್‍ನಲ್ಲಿ ತರಕಾರಿ, ಹಣ್ಣು ಮತ್ತು ದಿನಸಿ ವಸ್ತುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Advertisement