ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ಭೀತಿಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಲಕ್ಷಾಂತರ ಮೌಲ್ಯದ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳನ್ನು ತಯಾರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳ ತಯಾರಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು, ನಗರದ ಚಾಮರಾಜಪೇಟೆ ಮತ್ತು ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಗೊಡೌನ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 56 ಲಕ್ಷ ಮೌಲ್ಯದ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಜ್ಯೋತಿ ಕೆಮಿಕಲ್ಸ್ ಮತ್ತು ಸ್ವಾತಿ ಗೌಡಾನ್ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಸಿದ್ಧಪಡಿಸಿದ್ದ 100, 120, 200, 500 ಎಮ್‍ಎಲ್‍ನ ಒಟ್ಟು 8,500 ನಕಲಿ ಸ್ಯಾನಿಟೈಸರ್ ಬಾಟಲಿಗಳು, 4,500 ಖಾಲಿ ಪ್ಲಾಸ್ಟಿಕ್ ಬಾಟಲಿಗಳು, 4,500 ಸ್ಟಿಕ್ಕರ್‌ಗಳು ವಶಕ್ಕೆ ಪಡೆದು ರಾಜು ಮತ್ತು ಚಂದನ್ ಎಂಬ ಇಬ್ಬರು ಮಾರಾಟಗಾರರನ್ನು ಬಂಧಿಸಿದ್ದಾರೆ.
Advertisement
Advertisement
ಹೇಗೆ ತಯಾರಾಗ್ತಿತ್ತು ನಕಲಿ ಸ್ಯಾನಿಟೈಸರ್‌ಗಳು?
ಈ ನಕಲಿ ಸ್ಯಾನಿಟೈಸರ್‌ಗಳನ್ನು ಹೇಗೆ ತಯಾರು ಮಾಡ್ತಿದ್ದರು ಅನ್ನೋದನ್ನ ಕೇಳಿದರೆ ಅಚ್ಚರಿ ಆಗುತ್ತೆ. 50 ಲೀಟರ್ Isopropyl alcohol ಗೆ, 20 ಎಮ್‍ಎಲ್ brilliant blue colour, 15 ಎಮ್‍ಎಲ್ perfume ಮಿಶ್ರಣ ಮಾಡಿ 50 ಲೀಟರ್ ಸ್ಯಾನಿಟೈಸರ್ ರೆಡಿ ಮಾಡಲಾಗಿತ್ತು. ಇದಕ್ಕೆ ಒಂದು ಲೀಟರ್‌ಗೆ 80 ರೂಪಾಯಿ ಎಮ್‌ಆರ್‌ಪಿ ಬೆಲೆ ಇದೆ. ಆದ್ರೆ ಈ ನಕಲಿ ಸ್ಯಾನಿಟೈಸರ್‌ಗಳನ್ನು ಲೀಟರ್‌ಗೆ 800 ರೂಪಾಯಿಗೆ ಮಾರಾಟ ಮಾಡ್ತಿರೋದು ಬೆಳಕಿಗೆ ಬಂದಿದೆ.
ನಗರದಲ್ಲಿ ಇನ್ನಷ್ಟು ಇಂತಹ ನಕಲಿ ಸ್ಯಾನಿಟೈಸರ್ ತಯಾರಿಸೋ ಕಂಪನಿಗಳು ಹುಟ್ಟಿಕೊಂಡಿರುವ ಬಗ್ಗೆ ಮಾಹಿತಿಯಿದ್ದು, ಸಾರ್ವಜನಿಕರು ಅಧಿಕೃತ ತಯಾರಿಕಾ ಕಂಪನಿಗಳ ಬ್ರ್ಯಾಂಡೆಡ್ ಸ್ಯಾನಿಟೈಸರ್‌ಗಳನ್ನೇ ಕೊಳ್ಳಬೇಕು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.