ಚಾಮರಾಜನಗರ: ಇಷ್ಟು ದಿನ ಗೂಬೆ ಮಾರಾಟ ಆಯ್ತು, ಈಗ ನಕಲಿ ನಾಗಮಣಿ ಮಾರಾಟ ದಂಧೆಯು ಕೊಳ್ಳೇಗಾಲದಲ್ಲಿ ನಡೆಯುತ್ತಿದ್ದು, ಈ ದಂಧೆಯಲ್ಲಿ ಭಾಗಿಯಾಗಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮುತ್ತು ಎಂದು ಗುರುತಿಸಲಾಗಿದ್ದು, ಈತ ಹನೂರು ಸಮೀಪದ ಎಂ.ಜಿ.ದೊಡ್ಡಿಯಲ್ಲಿ ನಕಲಿ ನಾಗಮಣಿ ಮಾರಾಟ ಮಾಡುತ್ತಿದ್ದನು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುತ್ತಮುತ್ತ ನಾಗಮಣಿ ಖರೀದಿಸಿದರೆ ಅದೃಷ್ಟ ಬರುತ್ತೆ, ಒಳ್ಳೆಯದಾಗುತ್ತೆ ಎಂದು ಜನರನ್ನು ನಂಬಿಸಿ ದುಷ್ಕರ್ಮಿಗಳು ನಕಲಿ ನಾಗಮಣಿಗಳನ್ನು ಮಾರಾಟ ಮಾಡುತ್ತಿದ್ದರು.
Advertisement
Advertisement
ಮಾಟ ಮಂತ್ರಕ್ಕೆ ಹೆಸರಾಗಿರುವ ಕೊಳ್ಳೇಗಾಲದಲ್ಲಿ ನಾಗಮಣಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದಿದ್ದರಿಂದ ದಂಧೆಕೋರರು ನಕಲಿ ನಾಗಮಣಿ ದಂಧೆಯನ್ನು ಪ್ರಾರಂಭಿಸಿದ್ದರು. ಆದರಿಂದ ದಂಧೆಕೋರರು ಲಕ್ಷಾಂತರ ರೂಪಾಯಿಗೆ ನಕಲಿ ನಾಗಮಣಿಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದರು.
Advertisement
ಈ ವಿಷಯ ತಿಳಿದ ಪೊಲೀಸರು ದಂಧೆಯಲ್ಲಿ ಶಾಮಿಲಾಗಿದ್ದ ಓರ್ವ ಆರೋಪಿಯನ್ನು ನಕಲಿ ನಾಗಮಣಿಯನ್ನು ಜನರಿಗೆ ಮಾರುತ್ತಿದ್ದ ವೇಳೆ ಬಂಧಿಸಿದ್ದಾರೆ. ಘಟನೆ ಕುರಿತು ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv