– ಪೊಲೀಸ್ ಠಾಣೆಗೆ ದೂರು ನೀಡಿದ ಜಿಲ್ಲಾಡಳಿತ
ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ಜಿಲ್ಲೆಯ ಯುವತಿಯೋರ್ವಳಿಗೆ ಗ್ರಾಮಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು 1.50 ಲಕ್ಷ ರೂ. ವನ್ನು ನೀಡುವಂತೆ ಬೇಡಿಕೆ ಇಡಲಾಗಿದೆ. ಅದು ಜಿಲ್ಲಾಧಿಕಾರಿ ಗಮನಕ್ಕೆ ಬಂದ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
Advertisement
ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ಅನಾಮಿಕನೊಬ್ಬ ನಕಲಿ ಆದೇಶ ಪತ್ರವನ್ನು ಮಾಡಿ ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಕೆಲಸ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ್ಣದ ಕುಮಾರಿ ಯಶ್ವಿತ ಎಂಬ ಯುವತಿಗೆ ಗ್ರಾಮಲೆಕ್ಕಿಗಾರ ಪೋಸ್ಟ್ ಗೆ ಆಯ್ಕೆ ಅಗಿದೆ ಎಂದು ತಮ್ಮಗೆ ಸಿಂಧುತ್ವದ ಪ್ರಮಾಣ ಪತ್ರ ನೀಡಲು 1.50 ಲಕ್ಷ ರೂ. ನೀಡಲು ವಾಟ್ಸಪ್ ಮೂಲಕ ಕೇಳಿಕೊಂಡರು. ಇದನ್ನೂ ಓದಿ: ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ- ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ
Advertisement
ಅನುಮಾನಗೊಂಡ ಯುವತಿ ಇದು ಅಸಲಿ ಪತ್ರವೋ, ನಕಲಿ ಪತ್ರವೋ ಎಂದು ಗೊಂದಲ ಮೂಡಿದೆ. ಬಳಿಕ ಸ್ನೇಹಿತರಿಗೆ ಅವರು ಕಳಿಸಿದ ಪತ್ರದ ಫೋಟೋ ಕಳುಹಿಸಿದ್ದಾರೆ. ಈ ಫೋಟೋವನ್ನು ಗಮನಿಸಿದ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮಲೆಕ್ಕಿಗಾರ ಅಕ್ಷಾತಾ ಅವರು ಜಿಲ್ಲಾಧಿಕಾರಿ ಅವರಿಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವುದಿದ್ದಲ್ಲಿ ನಿಯಮಾನುಸಾರ ಮಾಡಲಾಗುತ್ತೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಇದು ನಕಲಿ ಆದೇಶ ಪತ್ರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕ್ಯಾತಿನಕೊಪ್ಪ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿತ್ತು
ಈ ರೀತಿಯ ನಕಲಿ ನೇಮಕಾತಿ ಪತ್ರ ನೀಡುವ ಜಾಲಕ್ಕೆ ಸಾರ್ವಜನಿಕರು ನಿರುದ್ಯೋಗಿಗಳು ಹಣ ನೀಡಿ ಮೋಸ ಹೋಗಬಾರದು. ಒಂದು ವೇಳೆ ಹಣ ನೀಡಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ಮನವಿ ಮಾಡಿದ್ದಾರೆ.
ಸದ್ಯ ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.