ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಗುರುಪ್ರಸಾದ್ (Guruprasad) ಅವರ ಸಾವಿನ ಸುದ್ದಿ ತಿಳಿದು ನಟರಾದ ದುನಿಯಾ ವಿಜಯ್, ನೀನಾಸಂ ಸತೀಶ್, ಡಾಲಿ ಧನಂಜಯ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡಿದ್ದ ಗುರುಪ್ರಸಾದ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಸಿನಿ ತಾರೆಯರು ಆಸ್ಪತ್ರೆಗೆ ಆಗಮಿಸಿದರು. ಇದನ್ನೂ ಓದಿ: ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್ ಪತ್ನಿ ನೀಡಿದ ದೂರಿನಲ್ಲಿ ಏನಿದೆ?
ಪತಿ ಕಳೆದುಕೊಂಡು ಕಣ್ಣೀರಿಡುತ್ತಿದ್ದ 2ನೇ ಪತ್ನಿ ಸುಮಿತ್ರಾ ಅವರಿಗೆ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಸಾಂತ್ವನ ಹೇಳಿದರು. ಇದೇ ವೇಳೆ ಸಿನಿಮಾ ರಂಗದಲ್ಲಿ ಗುರುಪ್ರಸಾದ್ ಅವರ ಸಾಧನೆಯನ್ನು ನಟರು ಕೊಂಡಾಡಿದರು. ಆತ್ಮಹತ್ಯೆ ವಿಚಾರಕ್ಕೆ ನೊಂದು ನುಡಿದರು.
ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ರಂಗನಾಯಕ ಚಿತ್ರದ ನಿರ್ಮಾಪಕ ವಿಖ್ಯಾತ್ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಗುರುಪ್ರಸಾದ್ ಮೊದಲ ಪತ್ನಿ ಆರತಿ ಹಾಗೂ ಮಗಳಿಗೆ ನಟ ತಬಲ ನಾಣಿ ಸಾಂತ್ವನ ಹೇಳಿದರು. ಇದನ್ನೂ ಓದಿ: ಗುರುಪ್ರಸಾದ್ ಮಗುವಿಗೆ ಸಹಾಯ ಮಾಡುತ್ತೇನೆ: ನಟ ಜಗ್ಗೇಶ್