ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಕೇಸಿನಲ್ಲಿ ಜೈಲಿಗೆ ಹೋಗಿದ್ದ ನಟ ದುನಿಯಾ ವಿಜಿ ಸೋಮವಾರ ಸಂಜೆ ರಿಲೀಸ್ ಆಗಿದ್ದಾರೆ. ಜೈಲು ಮುಕ್ತನಾಗುತ್ತಿದ್ದಂತೆಯೇ ರಾತ್ರಿ ಸುಮಾರು 11 ಗಂಟೆಗೆ ಎರಡನೇ ಪತ್ನಿ ಕೀರ್ತಿ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಕಾಂಪಿಟೇಷನ್ ಗೆ ಹೋಗಿ ವಾಪಸ್ ಬರುತ್ತಿದ್ದೆವು. ಆಗ ನಾನು ಕಿಟ್ಟಿ ಎಲ್ಲಿ ಎಂದು ಕೇಳಿದೆ ಅಷ್ಟೆ. ನನಗೂ ಕಿಟ್ಟಿಗೂ ನಡುವೆ ಯಾವುದೇ ದ್ವೇಷ ಇಲ್ಲ. ಆದರೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಾತನಾಡುತ್ತಿಲ್ಲ. ಅಲ್ಲಿ ಜನಸಂದಣಿಯಿಂದ ನನ್ನ ಮಗನ ತಲೆಯ ಮೇಲೆ ಮಾರುತಿ ಗೌಡ ಹೊಡೆದಿದ್ದಾರೆ. ಇದರಿಂದ ಅಲ್ಲಿ ಗಲಾಟೆ ಆಗಿದೆ. ಇದು ಕಿಟ್ಟಿಗೆ ಗೊತ್ತಿಲ್ಲ. ಮಾರುತಿಗೌಡ ತುಂಬಾ ಇಷ್ಟವಾದ ಹುಡುಗ ಎಂದು ಹೇಳಿದ್ದಾರೆ.
Advertisement
Advertisement
ಗಲಾಟೆಯ ವೇಳೆ ಮಾರುತಿ ಗೌಡ ಅವರಿಗೆ ಜನರು ಹಲ್ಲೆ ಮಾಡಿದ್ದಾರೆ. ಆದ್ರೆ ನನ್ನ ಕಡೆಯವರು ಹೊಡೆದಿಲ್ಲ. ಜನಸಂದಣಿಯಲ್ಲಿ ನಾನು ಮುಂದೆ ಬಂದೆ. ಪ್ರಮಾಣಿಕವಾಗಿ ನಾನು ಹೊಡೆದಿಲ್ಲ. ಗುಂಪಿನಲ್ಲಿ ಜನರು ಹೊಡೆದಿದ್ದರು. ಬಳಿಕ ಅವರನ್ನು ನಾನೇ ಬಿಡಿಸಿ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೆ. ಆಗ ಆರ್‍ಆರ್ ನಗರದ ಬಳಿ ಕಾರನ್ನ ನಿಲ್ಲಿಸಿದೆವು. ಮಾರುತಿ ಅವರ ಬಟ್ಟೆಗೆ ರಕ್ತ ಆಗಿತ್ತು. ಹೀಗಾಗಿ ಬಟ್ಟೆ ಬದಲಾಯಿಸೋಣ ಅಂತ ಹೇಳಿದೆ. ಆದರೆ ಮಾರುತಿ ಗೌಡ ಅದಕ್ಕೆ ಒಪ್ಪಲಿಲ್ಲ. ಅಲ್ಲದೇ ನನ್ನನ್ನು ಇಲ್ಲೇ ಬಿಟ್ಟು ಬಿಡಿ ಎಂದು ಹೇಳಿದರು. ನಾನು ಇದಕ್ಕೆ ಒಪ್ಪಲಿಲ್ಲ. ನಂತರ ಕಿಟ್ಟಿ ಕರೆ ಮಾಡಿದ್ರು, ಅವರಿಗೂ ಮಿಸ್ ಅಂಡರ್ ಸ್ಟಾಂಡ್ ಆಗಿತ್ತು. ಇದನ್ನು ಮಾತನಾಡಿ ಸರಿಪಡಿಸಲು ಕಿಟ್ಟಿ ಮನೆ ಬಳಿ ಹೋಗುತ್ತಿದ್ದೆವು ಅಂದ್ರು.
Advertisement
Advertisement
ಇದೇ ವೇಳೆ ಪೊಲೀಸ್ ಕಡೆಯಿಂದ ಕರೆ ಬಂತು. ನಂತರ ಮಾರುತಿಗೌಡರನ್ನು ಕರೆದುಕೊಂಡು ಹೈಗ್ರೌಂಡ್ ಪೊಲೀಸ್ ಠಾಣೆಗೆ ಹೋದೆವು. ಆದರೆ ಅಲ್ಲಿ ನಾನು ಪ್ರೀತಿಯಿಂದ ಮಾತನಾಡಿಸಲು ಹೋದಾಗ ಅವರೇ ನನಗೆ ಡಿಚ್ಚಿ ಹೊಡೆದರು. ನಾನು ಏನೂ ಮಾತನಾಡಿಲ್ಲ. ನಾನು ವಕೀಲರಿಗೂ ನಿಜ ಹೇಳಿದ್ದೇನೆ. ನಾನು ಹೊಡೆದಿಲ್ಲ, ನಾನು ಕಿಡ್ನಾಪ್ ಮಾಡಿಲ್ಲ. ಮಾರುತಿ ಗೌಡ ಅವರಿಗೆ 24 ಹೊಲಿಗೆ ಹಾಕಿಲ್ಲ. ಕಿಟ್ಟಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಸಂಜೆ ವೇಳೆಗೆ ಬೇರೆ ಬೇರೆ ಕೇಸ್ ಹಾಕಿಸಿದ್ದರು ಎಂದು ವಿಜಿ ತಿಳಿಸಿದ್ರು.
ನಾನು ಕಿಟ್ಟಿ ಜೊತೆ ಮಾತನಾಡುತ್ತೇನೆ. ನಾನು ಜಗಳ ಬಿಡಿಸಲು ಹೋದೆ, ಆದ್ರೆ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ನಾನು ಹೊಡೆದಿಲ್ಲ. ಈ ಬಗ್ಗೆ ನಾನು ಎಲ್ಲೂ ಮಾತನಾಡುವುದಿಲ್ಲ. ಒಂದು ದಿನ ಕಿಟ್ಟಿಗೆ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv