ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ – ಯುವತಿ ಪಟ್ಟು

Public TV
1 Min Read
Duniya vijay

ದಾವಣಗೆರೆ: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಅವರು ಆಗಮಿಸಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಯುವತಿಯೊಬ್ಬಳು ಪಟ್ಟು ಹಿಡಿದಿದ್ದಾಳೆ.

Duniya vijay 2

ಸಾಮಾನ್ಯವಾಗಿ ಸಂಬಂಧಿಕರು, ಅಣ್ಣಂದಿರು ಬಾರದಿದ್ದರೆ ಮದುವೆಯಾಗುವುದಿಲ್ಲ. ಅವರು ಬಂದು ಅಕ್ಷತೆ ಹಾಕಿದರೆ ಮಾತ್ರ ಮದುವೆ ಹಾಗುತ್ತೇನೆ ಅಂತ ಹೇಳುವ ಎಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಯುವತಿಯೊಬ್ಬಳು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದನ್ನೂ ಓದಿ: ಚಾಮುಂಡಿ ಬೆಟ್ಟವನ್ನು ಕಾಂಕ್ರೀಟ್ ಕಾಡು ಮಾಡಬೇಡಿ – ಮೋದಿಗೆ ಪತ್ರ ಬರೆದ ಭೈರಪ್ಪ

Duniya vijay 5

ದಾವಣಗೆರೆಯ ರಾಮನಗರದ ಅನುಷ ಹಠ ಹಿಡಿದ ಯುವತಿಯಾಗಿದ್ದು, ಅನುಷಾ ಕುಟುಂಬಸ್ಥರು ಎಲ್ಲರೂ ದುನಿಯಾ ವಿಜಯ್ ಅಭಿಮಾನಿಗಳಾಗಿದ್ದು, ಕಳೆದ ಐದು ವರ್ಷದ ಹಿಂದೆ ಅನುಷಾ ತಂದೆ ಶಿವಾನಂದ್ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ಅಲ್ಲದೆ ದುನಿಯಾ ವಿಜಯ್ ಬರುವವರೆಗೂ ಮನೆ ಓಪನಿಂಗ್ ಮಾಡುವುದಿಲ್ಲ ಎಂದು ಹಾಗೇಯೇ ಬಿಟ್ಟಿದ್ದರು. ಈ ವಿಚಾರ ತಿಳಿದು ವಿಜಯ್ ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

Duniya vijay 3

ಈಗ ಶಿವಾನಂದ ಅವರ ಮಗಳು ಅನುಷಾ ಅವರ ಮದುವೆ ಇದೇ 29ಕ್ಕೆ ನಿಶ್ಚಿತವಾಗಿದ್ದು, ದುನಿಯಾ ವಿಜಿ ಮದುವೆಗೆ ಬಂದು ಆಶೀರ್ವಾದ ಮಾಡದಿದ್ದರೆ ತಾಳಿಯೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಅಲ್ಲದೆ ಒಂಟಿ ಸಲಗ ಎಂದು ಹಚ್ಚೆ ಹಾಕಿಸಿಕೊಂಡಿರುವ ಅನುಷಾ, ಲಗ್ನ ಪತ್ರಿಕೆಯಲ್ಲಿ ಕೂಡ ದುನಿಯಾ ವಿಜಯ್ ಅವರ ಪೋಟೋ ಹಾಕಿಸಿಕೊಂಡಿದ್ದಾರೆ. ಮದುವೆಗೆ ದುನಿಯಾ ವಿಜಯ್ ಬಾರದಿದ್ದರೆ ಮದುವೆಯಾಗುವುದಿಲ್ಲ ಎಂದು ಅನುಷಾ ಪಟ್ಟು ಹಿಡಿದಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *