ಬೆಂಗಳೂರು: ನಟ ದುನಿಯಾ ವಿಜಯ್ ವಿರುದ್ಧ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಟ ದುನಿಯಾ ವಿಜಯ್ ತಮ್ಮ 46ನೇ ಹುಟ್ಟುಹಬ್ಬದ ದಿನ ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ್ದರು. ತಲ್ವಾರ್ ನಲ್ಲಿ ಕೇಕ್ ಮಾಡುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ತಕ್ಷಣ ಹೆಚ್ಚತ್ತ ಗಿರಿನಗರ ಪೊಲೀಸರು ನೋಟಿಸ್ ಜಾರಿ ಮಾಡಿ, ಅದಕ್ಕೆ ಉತ್ತರಿಸುವಂತೆ ಸೂಚನೆ ನೀಡಿದ್ದರು. ನೋಟಿಸ್ ಜಾರಿ ಆದ ಹಿನ್ನೆಲೆಯಲ್ಲಿ ವಿಜಯ್ ಕೂಡ ಪೊಲೀಸರ ಮುಂದೆ ಹಾಜರಾಗಿ ಸುಮಾರು ಎರಡು ಗಂಟೆಗಳ ಕಾಲ ಘಟನೆ ಸಂಬಂಧ ವಿವರಣೆ ನೀಡಿದ್ದರು. ಇದನ್ನೂ ಓದಿ: ಪೊಲೀಸರಲ್ಲಿ ಕ್ಷಮೆಯಾಚಿಸಿದ ದುನಿಯಾ ವಿಜಯ್
ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿ ಕೊಟ್ಟ ತಲ್ವಾರ್ ನಿಂದ ಕೇಕ್ ಮಾಡಿದೆ. ಅದು ಆಗ ನನಗೆ ತಪ್ಪು ಅಂತಾ ಗೊತ್ತಾಗಿರಲಿಲ್ಲ. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸೋದಾಗಿ ಮನವಿ ಮಾಡಿಕೊಂಡಿದ್ದರು. ಇದರ ಜೊತೆಗೆ ಬರ್ತ್ ಡೇ ವೇಳೆ ವಿಜಯ್ ಮನೆ ಅಕ್ಕಪಕ್ಕದವರು ಕೂಡ ಪೊಲೀಸ್ ಕಮೀಷನರ್‌ಗೆ ದೂರು ನೀಡಿದ್ದರು. ಇದನ್ನೂ ಓದಿ: ‘ಸಲಗ’ನಿಗೆ ತಿವಿದ ಖಡ್ಗ – ಪೊಲೀಸರಿಂದ ಎಫ್‌ಐಆರ್‌ಗೆ ಸಿದ್ಧತೆ
ಅಕ್ರಮವಾಗಿ ರಸ್ತೆ ಬಂದ್ ಮಾಡಿಕೊಂಡು ಮ್ಯೂಸಿಕ್ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಎಲ್ಲಾ ಘಟನೆಗಳ ಅಧಾರದ ಮೇಲೆ ತನಿಖೆ ನಡೆಸಿದ ಗಿರಿನಗರ ಪೊಲೀಸರು ಆರ್ಮ್ಸ್ ಆಕ್ಟ್ ಮತ್ತು 283 (ಸಾರ್ವಜನಿಕರ ಶಾಂತಿಗೆ ಭಂಗ ಮಾಡಿದ ಮತ್ತು ಅನುಮತಿ ಇಲ್ಲದೇ ರಸ್ತೆ ಬಂದ್ ಮಾಡಿದ) ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದಾರೆ.