ಬೆಂಗಳೂರು: ನಟ ದುನಿಯಾ ವಿಜಿ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ನಡುವೆ ರಾಜಿ ಸಂಧಾನದ ಊಹಾಪೋಹ ಕೇಳಿ ಬಂದಿದ್ದು, ಈ ಬಗ್ಗೆ ಸ್ವತಃ ಪಾನಿಪುರಿ ಕಿಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿಟ್ಟಿ, ನಾವು ದೇವರನ್ನು ನಂಬಿದ್ದೇವೆ. ನ್ಯಾಯ ಸಿಗಲಿ, ಸಿಗದಿರಲಿ. ಆದರೆ ಕಾನೂನು ಏನು ಹೇಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ನಾನು ಕಾನೂನು ಹೋರಾಟ ಮಾಡುತ್ತೇನೆ. ಕಾನೂನು ಚೌಕಟ್ಟಿನೊಳಗೆ ಇರುತ್ತೀನಿ. ಯಾವ ರಾಜಿ ಸಂಧನಾನೂ ಮಾಡಿಕೊಳ್ಳಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ
Advertisement
Advertisement
ದುನಿಯಾ ವಿಜಿ ಪತ್ನಿ ನಾಗರತ್ನ ಅವರು ಬಂದರೂ ಸಂಧಾನಕ್ಕೆ ನಾನು ಬಗ್ಗಲ್ಲ. ತನ್ನ ಪತಿಯನ್ನ ಹೇಗೆ ಉಳಿಸಿಕೊಳ್ಳಬೇಕು ಅನ್ನೋ ಆಸೆ ನಾಗರತ್ನ ಅವರಿಗೆ ಇದೆಯೋ ಹಾಗೇ ನನ್ನ ಮಗನನ್ನ ಕಾಪಾಡಿಕೊಳ್ಳಬೇಕು ಅನ್ನೋ ಆಸೆ ನನಗೂ ಇದೆ. ನನ್ನ ಮಗನಿಗೆ ತುಂಬಾ ನೋವಾಗಿದೆ ನಾನು ಯಾವ ಸಂಧಾನವನ್ನು ಮಾಡಿಕೊಳ್ಳಲ್ಲ. ಜಾಮೀನು ಸಿಗಲಿ ಬಿಡಲಿ ಕಾನೂನು ಚೌಕಟ್ಟಿನೊಳಗೆ ಇರುತ್ತೀನಿ. ಹೋರಾಟ ಮಾಡುತ್ತೇನೆ ಎಂದು ಪಾನಿಪುರಿ ಕಿಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ನಲ್ಲಿ ಶನಿವಾರ ಅರ್ಜಿ ವಿಚಾರಣೆ ನಡೆದಿದೆ. ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್ ಆದೇಶವನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv