ಕನ್ನಡ ರಾಜ್ಯೋತ್ಸವದ ವಿಶೇಷವಾಗಿ `ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಲಾಂಚ್ ಅದ್ದೂರಿಯಾಗಿ ನಡೆದಿದೆ. ದುನಿಯಾ ವಿಜಯ್ ನಟನೆಯ `ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ನಟಿ ಉಮಾಶ್ರೀ ಒಂದು ವಿಶೇಷ ಪಾತ್ರದಲ್ಲಿ ನಟಿಸುವ ಜೊತೆಗೆ ಈ ಸಿನಿಮಾದ ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಇಡೀ ಚಿತ್ರತಂಡ ಹಾಗೂ ಚಿತ್ರರಂಗದ ಬಗ್ಗೆ ಮಾತಾಡಿದ್ದಾರೆ.
ಲ್ಯಾಂಡ್ ಲಾರ್ಡ್ ಸಿನಿಮಾದ ಒಂದು ತುಣುಕು ನೋಡಿದೆ, ನೆಲದ ಮಣ್ಣಿನ ವಾಸನೆ ನೀಡುವಂತ ಚಿತ್ರವಿದು. ಈಗೀನ ಕಾಲದಲ್ಲೂ ಈ ರೀತಿಯ ಕಥೆ ಇದೀಯ ಅನಿಸುವುದು ಸಹಜ. ಅದಕ್ಕೆ ಉದಾಹರಣೆ ನಮ್ಮ ಸಿನಿಮಾ `ಲ್ಯಾಂಡ್ ಲಾರ್ಡ್’. ನನ್ನ ಅಂತರಂಗದ ಮಗ ವಿಜಯ್, ನನ್ನ ಮಗನ ಹೆಸರು ಕೂಡ ವಿಜಯ್. ನನಗೆ ಇವರಿಬ್ಬರು ಬೇರೆ ಅಲ್ಲ. ಸಿನಿಮಾ ಸೆಟ್‌ನಲ್ಲಿ ನನ್ನ ಸ್ವಂತ ಮಗನ ಜೊತೆಗೆ ಇದ್ದೇನೆ ಅನ್ನಿಸುತ್ತಿತ್ತು.
ನನ್ನ ಮಗ ವಿಜಯ್ ಧರೆಯ ದೊರೆಯಾಗಲಿ. ಗ್ರಾಮೀಣ ಭಾಗದಲ್ಲಿ ಇಂದಿಗೂ ಇಂತಹ ಘಟನೆಗಳಿವೆ.. ಲ್ಯಾಂಡ್ ಲಾರ್ಡ್ ದೊಡ್ಡ ಪ್ರಯೋಗ. 47 ವರ್ಷದ ಕಲಾ ಜಗತ್ತಿನ ಅನುಭನ ನನ್ನದು. ಆದರೆ ಈಗಲೂ ಹೊಸ ತಲೆಮಾರಿನ ಪಾತ್ರಗಳು ಹುಡುಕಿ ಬರ್ತಿವೆ ಎಂದಿದ್ದಾರೆ ಹಿರಿಯ ನಟಿ ಉಮಾಶ್ರೀ.

