ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರ ಮುಖ್ಯರಸ್ತೆಯಲ್ಲಿ ಮೊಬೈಲ್ ಸ್ಟುಡಿಯೋ ಶೋ ರೂಮನ್ನು ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್, ಶಾಸಕರಾದ ಭೈರತಿ ಸುರೇಶ್, ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಮತ್ತು ಓಪೋ ಕಂಪನಿಯ ನಿರ್ದೇಶಕಿ ಜೊಯ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಮತ್ತು ಶಾಸಕರಾದ ಭೈರತಿ ಸುರೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತಡಿದ ದುನಿಯಾ ವಿಜಯ್ ಅವರು, ಕಳೆದ 20 ತಿಂಗಳಿಂದ ಕೊರೊನಾ ಸಾಂಕ್ರಮಿಕ ರೋಗದಿಂದ ಚಲನಚಿತ್ರರಂಗ ಮತ್ತು ವ್ಯಾಪಾರ ವಹಿವಾಟುಗಳು ಆರ್ಥಿಕ ಸಂಕಷ್ಟ ಮತ್ತು ಜನರಿಗೆ ಉದ್ಯೋಗ ಅವಕಾಶವಿಲ್ಲದಂತೆ ಆಗಿತ್ತು. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

ಇದೀಗ ಕೊರೊನಾ ಕಡಿಮೆಯಾಗಿದೆ. ಎಲ್ಲ ಉದ್ದಿಮೆ, ವಹಿವಾಟು ಮತ್ತೆ ಚುರುಕು ಕಂಡಿದೆ. ತಾಯಿ ಚಾಮುಂಡೇಶ್ವರಿ, ಅಣ್ಣಮ್ಮ ದೇವಿಯ ಆಶೀರ್ವಾದ ಕೃಪೆ ನಾಡಿನ ಜನರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್‍ವೈ

