ಹಲ್ಲೆ ಮಾಡಿದ್ದನ್ನು ಪೊಲೀಸ್ರಿಗೆ ಹೇಳ್ಬೇಡ: ಮಾರುತಿ ಗೌಡಗೆ ವಿಜಿ ವಾರ್ನಿಂಗ್

Public TV
1 Min Read
MARUTHI GOWDA

ಬೆಂಗಳೂರು: ನಟ ದುನಿಯಾ ವಿಜಯ್ ನನ್ನ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಮಾರುತಿ ಗೌಡ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿಗೌಡ ಅವರು ಪಬ್ಲಿಕ್ ಟಿವಿಯ ಜೊತೆ ಮಾತನಾಡಿ ದುನಿಯಾ ವಿಜಿ ಕ್ರೂರ ಮುಖವನ್ನು ವಿವರಿಸಿದ್ದಾರೆ.

ಮಾರುತಿ ಗೌಡ ವಿವರಿಸಿದ್ದು ಹೀಗೆ:
ವಿಜಿ ಬಂದು ನನ್ನ ಚಿಕ್ಕಪ್ಪ ಕಿಟ್ಟಿ ಎಲ್ಲಿ ಎಂದು ಕೇಳಿದರು. ಅದಕ್ಕೆ ನಾನು ಗೊತ್ತಿಲ್ಲ ಎಂದೆ. ಬಳಿಕ 2 ನಿಮಿಷ ಬಿಟ್ಟು 10 ಮಂದಿ ಹುಡುಗರು ಬಂದು ಹೊಡೆದು ನನ್ನನ್ನು ಕಾರಿನ ಬಳಿ ತಳ್ಳಿದರು. ಅಲ್ಲಿಯೇ ವಿಜಯ್ ಕೂಡ ನಿಂತಿದ್ದರು. ಬಳಿಕ ವಿಜಿ ನನ್ನನ್ನು ಕಾರಿನೊಳಗೆ ಹತ್ತಿಸಲು ಹೇಳಿದರು. ಅದರಂತೆ ಕಾರಿನೊಳಗೆ ನನ್ನನ್ನು ಎಳೆದುಕೊಂಡು ಹೋದರು.

duniya vijay maruti gowda copy

ಡ್ರೈವರ್ ಪ್ರಸಾದ್, ವಿಜಿ, ಮಣಿ ಹಾಗೂ ದುನಿಯಾ ವಿಜಿ ಮಗ ಕಾರಿನಲ್ಲಿದ್ದರು. ಯಾವುದೇ ಕಾರಣಗಳನ್ನು ಹೇಳದೆ ನನಗೆ ಹಾಗೂ ನನ್ನ ಚಿಕ್ಕಪ್ಪ ಪಾನಿಪುರಿ ಕಿಟ್ಟಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜ್ಯಾಕ್ ರಾಡ್‍ನಲ್ಲಿ ಹಲ್ಲೆ ಮಾಡಿದರು. ಈ ಎಲ್ಲಾ ಘಟನೆಯನ್ನು ವಿಜಿ ಅವರ ಮಗ ವಿಡಿಯೋ ಮಾಡಿದ್ದಾನೆ. ಕಾರಿನಲ್ಲಿ ತುಂಬಾ ಸುತ್ತಾಡಿಸಿದ್ದಾರೆ. ನಾನು ಎಲ್ಲಿದ್ದೇನೆ ಎನ್ನುವುದು ಗೊತ್ತಾಗಲಿಲ್ಲ. ಆರ್.ಆರ್.ನಗರ ಆರ್ಚ್ ಅನ್ನು ಮಾತ್ರ ನಾನು ಕೊನೆಯದಾಗಿ ನೋಡಿದೆ.

ಇದೇ ವೇಳೆ ನನ್ನ ಚಿಕ್ಕಪ್ಪ ವಿಜಿಗೆ ಫೋನ್ ಮಾಡಿದಾಗಲೂ ಅವರಿಗೆ ಚೆನ್ನಾಗಿ ಬೈದು ನಿಂದಿಸಿದರು. ನಂತರ ಪೊಲೀಸರು ಕರೆ ಮಾಡಿ ವಿಜಯ್‍ಗೆ ಬರಲು ಹೇಳಿದಾಗ, ನಿಜ ಹೇಳಬಾರದು, ನಾನು ನಿನಗೆ ಏನೂ ಮಾಡಿಲ್ಲ ಎಂದು ಹೇಳುವಂತೆ ಸೂಚಿಸಿ ಎಚ್ಚರಿಕೆ ನೀಡಿದರು. ಹೆಚ್ಚಿನ ಹಲ್ಲೆ ಮಾಡಿದ್ದರಿಂದ ನನಗೆ ಕಣ್ಣುಗಳು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ, ಮಂಜಾಗಿ ಕಾಣಿಸುತ್ತಿತ್ತು. ಇದೀಗ ನನ್ನ ತುಟಿಗೆ 16 ಸ್ಟಿಚ್ ಹಾಕಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು.

DUNIYA VIJAY1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *