ಸಲಗ, ಭೀಮ (Bheema) ಚಿತ್ರದ ಮೂಲಕ ನಟನೆಯ ಜೊತೆಗೆ ನಿರ್ದೇಶಕನಾಗಿಯೂ ದುನಿಯಾ ವಿಜಯ್ (Duniya Vijay) ಸೈ ಎನಿಸಿಕೊಂಡಿದ್ದಾರೆ. ಇದೀಗ ವಿನಯ್ ರಾಜ್‌ಕುಮಾರ್‌ಗೆ (Vinay Rajkumar) ಆ್ಯಕ್ಷನ್ ಕಟ್ ಹೇಳೋಕೆ ವಿಜಯ್ ರೆಡಿಯಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟ ಮಾಹಿತಿ ನೀಡಿದ್ದಾರೆ.
View this post on Instagram
ವಿನಯ್ ರಾಜ್‌ಕುಮಾರ್ ಅವರು ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ (City Lights) ಚಿತ್ರತಂಡಕ್ಕೆ ಸಾಥ್ ನೀಡಿರೋದಾಗಿ ತಿಳಿಸಿದ್ದಾರೆ. ವಿಜಯ್ ನಿರ್ದೇಶನದ 3ನೇ ಚಿತ್ರಕ್ಕೆ ಪುತ್ರಿ ಮೋನಿಷಾಗೆ (Monisha) ಡೈರೆಕ್ಟರ್ ಮಾಡುತ್ತಿರೋದು ವಿಶೇಷವಾಗಿದೆ. ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿಲ್ಲ. ನಟ ತಂಡ ಸೇರಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮೋನಿಷಾ ನಟಿಸುತ್ತಿರುವ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಹಳ್ಳಿ ಹುಡುಗಿಯ ಮುಗ್ಧ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮೋನಿಷಾ ನಟನೆಯ ಮೊದಲ ಸಿನಿಮಾಗೆ ‘ಸಿಟಿ ಲೈಟ್ಸ್’ ಎಂದು ಟೈಟಲ್ ಇಡಲಾಗಿದ್ದು, ‘ಜವಾಬ್ ದಾರಿ ದೀಪಗಳು’ ಅನ್ನೋ ಟ್ಯಾಗ್ ಲೈನ್ ಕೂಡ ಈ ಸಿನಿಮಾಕ್ಕಿದೆ.