ಬೆಂಗಳೂರು: ದುನಿಯಾ ವಿಜಯ್‍ನಿಂದ ಹಲ್ಲೆಗೊಳಗಾಗಿದ್ದ ಮಾರುತಿ ಗೌಡ ವಿಕ್ರಮ್ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ.
ನಟ ದುನಿಯಾ ವಿಜಿ ಹಲ್ಲೆಯಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಮಾರುತಿಗೌಡ ದಾಖಲಾಗಿದ್ದರು. ಆರು ದಿನಗಳ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿಗೌಡ ತುಟಿಗೆ ಗಾಯವಾಗಿ, ಕಣ್ಣು ಮತ್ತು ಮುಖ ಊತ ಬಂದಿತ್ತು. ಹೀಗಾಗಿ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ತುಟಿಗೆ ಹದಿನೈದು ಹೊಲಿಗೆ ಹಾಕಲಾಗಿತ್ತು. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
Advertisement
ಕಳೆದ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಸ್ಪರ್ಧೆ ನೋಡಲು ದುನಿಯಾ ವಿಜಿ ತಮ್ಮ ತಂಡದೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು.
Advertisement
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾಗಲೇ ಬುಧವಾರ ಪಬ್ಲಿಕ್ ಟಿವಿಯೊಂದಿಗೆ ಮಾರುತಿಗೌಡ ದುನಿಯಾ ವಿಜಿ ಕ್ರೂರ ಮುಖವನ್ನು ವಿವರಿಸಿದ್ದರು. ಇದನ್ನೂ ಓದಿ: ಹಲ್ಲೆ ಮಾಡಿದ್ದನ್ನು ಪೊಲೀಸ್ರಿಗೆ ಹೇಳ್ಬೇಡ: ಮಾರುತಿ ಗೌಡಗೆ ವಿಜಿ ವಾರ್ನಿಂಗ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement