ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ (Kottayam) ಕಂಡು ಕೇಳರಿಯದಂತಹ ಭಯಾನಕ ರ‍್ಯಾಗಿಂಗ್ (Ragging) ನಡೆದಿದೆ.
ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ (Government Nursing College) ವ್ಯಾಸಂಗ ಮಾಡುತ್ತಿದ್ದ ಮೂವರು ಕಿರಿಯ ವಿದ್ಯಾರ್ಥಿಗಳನ್ನು ಮೂರನೇ ವರ್ಷದ ಸೀನಿಯರ್ ವಿದ್ಯಾರ್ಥಿಗಳು ಬೆತ್ತಲೆ ಮಾಡಿ, ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ನೀಡಿದ್ದಾರೆ.
Kottayam, Kerala | Principal of Kottayam Government Nursing College, Dr Sulekha AT says, “There were no written complaints from the students about ragging issues, and anti-ragging campaigns are now going on the college.” pic.twitter.com/3oIWhtnaSv
— ANI (@ANI) February 12, 2025
ಕಂಪಾಸ್‌ನಿಂದ ಇರಿದು ಕ್ರೂರವಾಗಿ ಥಳಿಸಿ ಬಾಯಿಗೆ ಲೋಷನ್ ತುಂಬಿ ಅಮಾನುಷವಾಗಿ ವರ್ತಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆ ಪಾಲಾಗಿದ್ದಾರೆ. ಇದನ್ನೂ ಓದಿ: ಉಚಿತ ಯೋಜನೆಗಳಿಂದ ಜನ ಕಷ್ಟಪಟ್ಟು ಕೆಲಸ ಮಾಡ್ತಿಲ್ಲ – ಸುಪ್ರೀಂ ಅಸಮಾಧಾನ
ನವೆಂಬರ್‌ನಿಂದ ನಿರಂತರವಾಗಿ ನಮ್ಮ ಮೇಲೆ ರ‍್ಯಾಗಿಂಗ್ ನಡೆಯುತ್ತಿದೆ. ಮದ್ಯಪಾನಕ್ಕಾಗಿ ಹಣ ಕಸಿಯುತ್ತಿದ್ದರು. ಹಣ ನೀಡದ್ದಕ್ಕೆ ಹೊಡೆಯಲು ಆರಂಭಿಸಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ರ‍್ಯಾಗಿಂಗ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಪೊಲೀಸರು ಆರೋಪಿ ವಿದ್ಯಾರ್ಥಿಗಳಾದ ಸ್ಯಾಮುಯೆಲ್ ಜಾನ್ಸನ್, ಎನ್ ಎಸ್ ಜೀವಾ, ಕೆಪಿ ರಾಹುಲ್ ರಾಜ್, ರಿಜಿಲ್ ಜಿತ್, ವಿವೇಕ್‌ನನ್ನು ಬಂಧಿಸಿದ್ದಾರೆ.