ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salman) ನಟನೆಯ ತೆಲುಗಿನ ಚಿತ್ರಕ್ಕೆ ಕ್ಯಾಚಿ ಆಗಿರುವ ಟೈಟಲ್‌ವೊಂದು ಫಿಕ್ಸ್ ಆಗಿದೆ. ಮಹಾನದಿ, ಸೀತಾರಾಮಂ (Seetharamam Film) ಸಿನಿಮಾ ನಂತರ ಮತ್ತೆ ನಟನೆಗೆ ಮರಳಿದ್ದಾರೆ.
ಟಾಲಿವುಡ್‌ನಲ್ಲಿ (Tollywood) ಇದೀಗ ಮತ್ತೆ ಹೊಸ ಚಿತ್ರವೊಂದನ್ನು ದುಲ್ಕರ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ. ಅದಕ್ಕೆ ‘ಆಕಾಶಂ ಲೋ ಒಕ ತಾರಾ’ (Aakasam Lo Oka Tara) ಎಂಬ ಟೈಟಲ್ ಇಡಲಾಗಿದೆ. ಪೋಸ್ಟರ್‌ನಲ್ಲಿ ಸಿಂಪಲ್ ಆಗಿ ಕಂಡರೂ ನೋಡುಗರಿಗೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
View this post on Instagram
ದುಲ್ಕರ್ ಈ ಚಿತ್ರಕ್ಕೆ ಪವನ್ ಸಾದಿನೇನಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.
ಅಂದಹಾಗೆ, ಮೃಣಾಲ್ ಠಾಕೂರ್ ಜೊತೆಗಿನ ‘ಸೀತಾರಾಮಂ’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಆ ನಂತರ ಕಲ್ಕಿ ಸಿನಿಮಾದಲ್ಲಿ ದುಲ್ಕರ್ ಗೆಸ್ಟ್ ರೋಲ್ ಮಾಡಿದ್ರೂ ನಟನ ಅಭಿನಯಕ್ಕೆ ಫ್ಯಾನ್ಸ್ ಜೈ ಎಂದಿದ್ದರು. ಈಗ ತೆಲುಗಿನ ‘ಆಕಾಶಂ ಲೋ ಒಕ ತಾರಾ’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ.