ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

Public TV
1 Min Read
mrunal thakur 1 2

‘ಸೀತಾರಾಮಂ’ (Seetha Ramam) ಸಿನಿಮಾ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಜೋಡಿ ದುಲ್ಕರ್ ಸಲ್ಮಾನ್ (Dulquer Salmaan) ಮತ್ತು ಮೃಣಾಲ್ ಠಾಕೂರ್ ಈಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2 ವರ್ಷಗಳ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಸೀತಾ ಮತ್ತು ರಾಮ್ ಕಾಣಿಸಿಕೊಳ್ಳಲಿದ್ದಾರೆ.

mrunal 1 1

2022ರಲ್ಲಿ ಸೀತಾರಾಮಂ ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಸೀತಾ ಮತ್ತು ರಾಮ್ ಲವ್ ಸ್ಟೋರಿ ನೋಡಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬಂದಿತ್ತು. ಈ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಎಂದು ಅನೇಕರು ಆಸೆಪಟ್ಟಿದ್ದರು. ಇದೀಗ ಅದೇ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

mrunal thakur 1 3

‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಮೃಣಾಲ್ (Mrunal Thakur) ನಟಿಸುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು. ಆದರೆ ಈಗ ದುಲ್ಕರ್ ಸಲ್ಮಾನ್ ಕೂಡ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಅತಿಥಿ ಪಾತ್ರವಾಗಿದ್ರೂ ಚಿತ್ರದಲ್ಲಿ ತಿರುವು ಕೊಡಲಿರುವ ಪಾತ್ರಕ್ಕೆ ಜೀವತುಂಬಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

mrunal thakur

ಪ್ರಭಾಸ್ (Prabhas) ಸಿನಿಮಾದಲ್ಲಿ ಜೊತೆಯಾಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಯಾವದಕ್ಕೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಎದುರು ನೋಡ್ತಿದ್ದಾರೆ.

ಅಂದಹಾಗೆ, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಇದೇ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.

Share This Article