ಮಲಯಾಳಂ, ಹಿಂದಿ ಸಿನಿಮಾಗಳ ನಂತರ ದುಲ್ಕರ್ ಸಲ್ಮಾನ್ (Dulquer Salmaan) ತೆಲುಗಿನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಅವರು ಎರಡು ಚಿತ್ರಗಳು ರಿಲೀಸ್ ಆಗಿದ್ದು, ಮೂರನೇ ಸಿನಿಮಾ ರೆಡಿ ಆಗುತ್ತಿದೆ. ಈ ಚಿತ್ರಕ್ಕೆ ಕ್ಯಾಚಿ ಟೈಟಲ್ ಹುಡುಕಿದೆ ಚಿತ್ರತಂಡ. ವೆಂಕಿ ಅಟ್ಲೂರಿ (Venky Atluri)ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ (Lucky Baskar) ಎಂದು ಹೆಸರಿಡಲಾಗಿದೆ.
ತೆಲುಗು ಚಿತ್ರೋದ್ಯಮದಲ್ಲಿ ದುಲ್ಕರ್ ಸಲ್ಮಾನ್ ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ‘ಮಹಾನಟಿ’ ಮತ್ತು ಸೀತಾ ರಾಮಂ ಸಿನಿಮಾದ ನಂತರ ತೆಲುಗಿನಲ್ಲೂ ಸಾಕಷ್ಟು ಬೇಡಿಕೆಯ ನಟರಾಗಿ ತಮ್ಮ ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ ದುಲ್ಕರ್. ಹಾಗಾಗಿ ಹೊಸ ಸಿನಿಮಾದ ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟೈಟಲ್ ಅನಾವರಣದ ಜೊತೆಗೆ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದ್ದು, ನೂರು ರೂಪಾಯಿ ನೋಟಿನ ಹಿಂದೆ ಅರೆಬರೆಯಾಗಿ ಕಾಣುವ ದುಲ್ಕರ್ ಎಲ್ಲರಿಗೂ ಇಷ್ಟವಾಗುತ್ತಾರೆ. ಸಿನಿಮಾ ಕಥೆ ಹಾಗೂ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ಇದ್ದರೂ, ದುಲ್ಕರ್ ಬಗ್ಗೆ ಆಗಾಗ್ಗೆ ಅಪ್ ಡೇಟ್ ನೀಡುತ್ತಲೇ ಇರುತ್ತದೆ ಚಿತ್ರತಂಡ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]