ಮಲಯಾಳಂ ಸಿನಿಮಾ ರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸದ್ಯ ಅವರು ರಶ್ಮಿಕಾ ಮಂದಣ್ಣ ಜೊತೆ ಸೀತಾ ರಾಮಂ ಸಿನಿಮಾ ಮಾಡಿದ್ದು, ಈ ಚಿತ್ರದ ಬಿಡುಗಡೆಗಾಗಿ ಪ್ರಚಾರ ಮಾಡುತ್ತಿದ್ದಾರೆ. ಇದೇ ಆಗಸ್ಟ್ 5 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾ ರಿಲೀಸಿಗೂ ಮುನ್ನ ಶಾಕಿಂಗ್ ಹೇಳಿಕೆಯ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಆಗಸ್ಟ್ 5 ರಂದು ರಿಲೀಸ್ ಆಗುತ್ತಿರುವ ‘ಸೀತಾ ರಾಮಂ’ ಸಿನಿಮಾವು ರೊಮ್ಯಾಂಟಿಕ್ ಕಥೆಯನ್ನು ಹೊಂದಿದ್ದು, ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಟ್ರೈಲರ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ ಈಗಾಗಲೇ ಅನೇಕ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಿದ್ದು, ಆ ಸಿನಿಮಾಗಳಿಗಿಂತಲೂ ಇದು ಚೆನ್ನಾಗಿ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ಮುಂದೆ ಈ ರೀತಿಯ ಚಿತ್ರಗಳನ್ನು ಮಾಡಲಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ ದುಲ್ಕರ್. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್
ನಾನು ರೊಮ್ಯಾಂಟಿಕ್ ಹೀರೋ ಆಗಿ ಜನರ ಮನಸ್ಸು ಗೆದ್ದಿದ್ದೇನೆ. ನಾನು ಈವರೆಗೂ ನಟಿಸಿರುವ ಸಿನಿಮಾಗಳಲ್ಲಿ ಹೆಚ್ಚಿನ ಚಿತ್ರಗಳು ಇಂಥದ್ದೇ ಕಥೆಯನ್ನು ಆಧರಿಸಿವೆ. ಆದರೆ, ಇನ್ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಲಾರೆ. ಮಾಸ್ ಚಿತ್ರಗಳತ್ತ ಮುಖ ಮಾಡುವೆ ಎಂದಿದ್ದಾರೆ. ಇಂಥದ್ದೊಂದು ನಿರ್ಧಾರಕ್ಕೆ ಕಾರಣವನ್ನು ಅವರು ತಿಳಿಸಿಲ್ಲ. ಆದರೆ, ಅಭಿಮಾನಿಗಳಂತೂ ಭಾರೀ ನಿರಾಸೆಯನ್ನು ವ್ಯಕ್ತ ಪಡಿಸಿದ್ದಾರೆ.