ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿದೆ.
ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್ ಗಿರಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ದಶಕಗಳ ಬಳಿಕ ಕಲ್ಲತ್ತಿಗರಿ ಫಾಲ್ಸ್‍ನಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಪ್ರಸಿದ್ಧ ವೀರಭದ್ರಸ್ವಾಮಿ ದೇವಾಲಯದ ಮಟ್ಟದಲ್ಲಿ ಹರಿಯುತ್ತಿರುವ ನೀರು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ದೇವಾಲಯದ ಬಳಿ ಹೋಗಲು ಭಕ್ತರು ಹಾಗೂ ಪ್ರವಾಸಿಗರು ಹಿಂದೇಟು ಹಾಕ್ತಿದ್ದಾರೆ.
Advertisement
Advertisement
ನೀರಿನ ಪ್ರಮಾಣ ಕಂಡ ಕಲ್ಲತ್ತಿಪುರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆದ್ರೆ, ದಶಕಗಳ ಬಳಿಕ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತವನ್ನ ಕಾಣಲು ಸುತ್ತಮುತ್ತಲಿನ ನೂರಾರು ಜನ ಕಲ್ಲತ್ತಿಗರಿ ಫಾಲ್ಸ್ ಬಳಿ ಜಮಾಯಿಸುತ್ತಿದ್ದಾರೆ.
Advertisement
ಎಂತಹ ಬರಗಾಲದಲ್ಲೂ ಈ ದೇವಾಲಯದ ಬಳಿ ನೀರು ನಿಂತಿರೋ ಉದಾಹರಣೆಯೇ ಇಲ್ಲ. ಮೂರ್ನಾಲ್ಕು ವರ್ಷ ಬರಗಾಲದಲ್ಲೂ ಇಲ್ಲಿ ನೀರು ಸದಾ ಹರಿಯುತ್ತಿರುತ್ತೆ. ಆದ್ರೆ, ಮೂರ್ನಾಲ್ಕು ವರ್ಷಗಳಿಂದ ತೀರಾ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರು ಮೂರೇ ದಿನಕ್ಕೆ ಹೀಗೆ ಜಲಪಾತದಂತೆ ಹರಿಯುತ್ತಿರೋದು ಕಂಡು ಸ್ಥಳೀಯರು ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಸಂತಸ ವ್ಯಕ್ತಪಡಿಸ್ತಿದ್ದಾರೆ.
Advertisement
https://www.youtube.com/watch?v=_Nls9fuOjUs