– ಕಳೆದ ವರ್ಷಕ್ಕಿಂತ 9.22 ಕೋಟಿ ರೂ ಆದಾಯ ಹೆಚ್ಚಳ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಸುರಿದ ಭಾರೀ ಮಳೆಯ ಪರಿಣಾಮ ನಮ್ಮ ಮೆಟ್ರೋ (Namma Metro) ಆದಾಯದ ಏರಿಕೆಯಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ (Bengaluru) ಧಾರಾಕಾರ ಮಳೆ ಸುರಿದಿತ್ತು. ಇದರ ಪರಿಣಾಮ ಹೆಚ್ಚಿನ ಜನರು ಸಂಚಾರಕ್ಕಾಗಿ ಮೆಟ್ರೋ ರೈಲನ್ನು ಬಳಸಿದ್ದರು. ಇದರ ಪರಿಣಾಮ ನಮ್ಮ ಮೆಟ್ರೋ ರೈಲಿನ ಆದಾಯದಲ್ಲಿ ಭಾರೀ ಏರಿಕೆಯಾಗಿದೆ.ಇದನ್ನೂ ಓದಿ: ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಉಗ್ರರಿಗಾಗಿ ತೀವ್ರ ಶೋಧ
ಕಳೆದ ವರ್ಷಕ್ಕಿಂತ ಈ ವರ್ಷ ಮೆಟ್ರೋ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ. 2023ರಲ್ಲಿ ಅಕ್ಟೋಬರ್ ತಿಂಗಳ 24 ದಿನಗಳಲ್ಲಿ 39.12 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ 48.35 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 9.22 ಕೋಟಿ ರೂ. ಹೆಚ್ಚಿನ ಆದಾಯ ಬಂದಿದೆ.
2023ರ ಅ.1 ರಿಂದ ಅ.24 ರವರೆಗೆ ಒಟ್ಟು 1.52 ಕೋಟಿ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದರು. 2024ರ ಅಕ್ಟೋಬರ್ ಆರಂಭದಿಂದ ಇಲ್ಲಿಯವರೆಗೂ ಒಟ್ಟು 1.85 ಕೋಟಿ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 32.90 ಲಕ್ಷ ಜನರು ಹೆಚ್ಚಾಗಿ ಪ್ರಯಾಣಿಸಿದ್ದಾರೆ. ಅದರಲ್ಲೂ ಅತೀ ಹೆಚ್ಚು ಪ್ರಯಾಣಿಕರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದವನ್ನು (Majestic Metro Station) ಬಳಸಿ ಪ್ರಯಾಣಿಸಿದ್ದಾರೆ.ಇದನ್ನೂ ಓದಿ: ಸರ್ಕಾರದ ಮುಖ್ಯಸ್ಥರ ಭೇಟಿಯಾದ್ರೆ ಡೀಲ್ ಎಂದರ್ಥವಲ್ಲ: ಮೋದಿ ಭೇಟಿ ಬಗ್ಗೆ ಮೌನ ಮುರಿದ ಸಿಜೆಐ