ಬೆಂಗಳೂರು: ನಾವು ಸರ್ಕಾರಿ ನೌಕರರಿಗೆ ಸಂಬಳ (Salary) ಜಾಸ್ತಿ ಮಾಡುತ್ತೇವೆ ಎಂದು ಹೇಳಿದ ಮೇಲೆ ಬೊಮ್ಮಾಯಿ ಸರ್ಕಾರ 17% ವೇತನ ಹೆಚ್ಚಳ ಮಾಡಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಸರ್ಕಾರಿ ನೌಕರರ ಸಂಬಳ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಯಾತ್ರೆಗೆ ದೊಡ್ಡ ಬೆಂಬಲ ಸಿಕ್ಕಿದೆ. ಸಿದ್ದರಾಮಯ್ಯ ಯಾತ್ರೆಯನ್ನು ನೋಡಿದ್ದೀರಿ. ಜೆಪಿ ನಡ್ಡಾ ಯಾತ್ರೆಗೂ ನೋಡಿದ್ದೀರಾ. ಜನ ನಮ್ಮ ಪರ ಇದ್ದಾರೆ. ನಮ್ಮ ಕೆಲಸ, ನಮ್ಮ ಮಾತು, ನಮ್ಮ ನುಡಿ ನಮ್ಮ ಗ್ಯಾರಂಟಿ ಜನ ಒಪ್ಪುತ್ತಾರೆ ಎಂದು ವಿಶ್ವಾಸ ವ್ಯಕ್ತಡಿಸಿದರು.
Advertisement
Advertisement
ಸರ್ಕಾರ ಏನೇ ಗ್ಯಾರಂಟಿ ಕೊಡಲಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾನು ಸರ್ಕಾರಿ ನೌಕರರಿಗೆ ವೇತನ ಕೊಡ್ತೀನಿ ಅಂತ ಹೇಳಿದೆ. ನಾನು ಹೇಳಿದ ಮೇಲೆ ಸಿಎಂ 17% ಹೆಚ್ಚಳ ಮಾಡಿದ್ದಾರೆ. ನಾನು ಮಾತು ಕೊಟ್ಟ ಮೇಲೆ ಮಧ್ಯಂತರ ಪರಿಹಾರ ಸರ್ಕಾರ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಅವರಿಗೆ ಒಂದು ದಾರಿ ಕೊಟ್ಟಿತ್ತು. ನಾವು ಹೇಳಿದ ಬಳಿಕ ಸರ್ಕಾರ ಘೋಷಣೆ ಮಾಡಿತು ಅಂತ ವೇತನ ಹೆಚ್ಚಳ ಕ್ರೆಡಿಟ್ ತೆಗೆದುಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ATM ಮಾಡಿಕೊಳ್ಳುತ್ತೆ: ಅಶೋಕ್
Advertisement
Advertisement
ಸರ್ಕಾರಿ ನೌಕರರ ಬೇಡಿಕೆ ಸರಿ ಇದೆ. ಬೆಲೆ ಏರಿಕೆಯಿಂದ ಅವರಿಗೂ ಸಮಸ್ಯೆ ಆಗಿದೆ. ಅದಕ್ಕೆ ವೇತನ ಹೆಚ್ಚಳ ಕೇಳಿದ್ದಾರೆ. ನಿನ್ನೆಯೂ ಗ್ಯಾಸ್ ಜಾಸ್ತಿ ಆಗಿದೆ. ಮೊದಲು ಸರ್ಕಾರ ಜಾಸ್ತಿ ಮಾಡುವುದಿಲ್ಲ ಎಂದು ಹೇಳಿತ್ತು. ನಾವು ಹೇಳಿದ ಮೇಲೆ ಸಿಎಂ ಸಂಬಳ ಜಾಸ್ತಿ ಮಾಡಿದ್ದು ಸರ್ಕಾರಿ ನೌಕರರು ದಡ್ಡರಲ್ಲ ಎಂದರು.
OPS-NPS ವಿಚಾರದಲ್ಲಿ ನಮ್ಮ ನಿಲುವು ಹೇಳಿದ್ದೇವೆ. ಎಲ್ಲರೂ ಬಂದು ನಮ್ಮ ಬಳಿ ಚರ್ಚೆ ಮಾಡಿದ್ದಾರೆ. ಈಗಾಗಲೇ OPS ವಿಚಾರವಾಗಿ ಮಾತು ಕೊಟ್ಟಿದ್ದೇವೆ.ನಮ್ಮ ಮೇಲೆ ಸರ್ಕಾರಿ ನೌಕರರಿಗೆ ಭರವಸೆ ಇದೆ. ಅವರ ಮೇಲೆ ನಮಗೆ ಭರವಸೆ ಇದೆ ಎಂದು ಹೇಳಿದರು.