ಬೆಂಗಳೂರು: ವಾತಾವರಣ ಬದಲಾದಂತೆ ಮನುಷ್ಯರು ಕೂಡ ಬದಲಾಗುತ್ತಿದ್ದಾರೆ. ಆಚಾರ, ವಿಚಾರದಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯವಾಗಿ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಯುವಕರು ಚಿಕ್ಕ ವಯಸ್ಸಿಗೆ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಮುಖವಾಗಿ ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. 10 ವರ್ಷಗಳ ಹಿಂದೆ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಕಳೆದ 10 ವರ್ಷದಿಂದ ಯುವಕರು ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ 22% ಏರಿಕೆ ಆಗಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಅವರು ಈ ಬಗ್ಗೆ ಅಚ್ಚರಿಯ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
Advertisement
ಬದಲಾದ ಜೀವನ ಶೈಲಿಯಿಂದ 25 ರಿಂದ 45 ವರ್ಷ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಚಿಕ್ಕ ವಯಸ್ಸು, ಯಂಗ್ ಆಗಿದ್ದೇವೆ ಅಂತ ನಿರ್ಲಕ್ಷ್ಯ ಮಾಡಬೇಡಿ. 1,000 ಜನಕ್ಕೆ ಟ್ರೀಟ್ ಮೆಂಟ್ ಕೊಟ್ಟರೆ 30% ಅಷ್ಟು 45 ವರ್ಷ ವಯಸ್ಸಿನವರಿಗೆ ಹೃದಯಾಘಾತ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೃದಯಾಘಾತಕ್ಕೆ ಏನು ಕಾರಣ ಎನ್ನುವುದನ್ನು ಡಾ. ಮಂಜುನಾಥ್ ವಿವರಣೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್ ನೀರು ಮರುಬಳಸಿ ತಯಾರಿಸಿದ ಬಿಯರ್ ಸೂಪರ್ ಎಂದ ಮದ್ಯಪ್ರಿಯರು!
Advertisement
Advertisement
ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಏನು ಕಾರಣವೇನು?
* ಧೂಮಪಾನ ಮಾಡುವುದು
* ಮದ್ಯಪಾನ ಮಾಡುವುದು
* ಆಹಾರ ಪದ್ದತಿ ಬದಲಾವಣೆ
* ಆಹಾರ ಪದಾರ್ಥ ಬದಲಾವಣೆ
* ಸಕ್ಕರೆ ಖಾಯಿಲೆ ಜೊತೆಗೆ ಬರುತ್ತಿರುವುದು
* ದಿನಚರಿ ಬದಲಾಗಿರುವುದು
* ನಿದ್ರೆ ಬರದೇ ಇರುವುದು
* ಫ್ಯಾಮಿಲಿ ಸ್ಟ್ರೆಸ್
* ನಿರುದ್ಯೋಗದ ಸಮಸ್ಯೆ
* ವಿದ್ಯಾರ್ಥಿಗಳಿಗೆ ಸಿಕ್ಕಪಟ್ಟೆ ಒತ್ತಡ
* ಭವಿಷ್ಯದ ಒತ್ತಡ
* ಪೋಷಕರ ಒತ್ತಡ
* ವರ್ಷದಲ್ಲಿ ಮಾಡಬೇಕಾದ ಸಾಧನೆ 10 ತಿಂಗಳಲ್ಲಿ ಮಾಡಬೇಕು ಅನ್ನೋದು
* ವಾಯುಮಾಲಿನ್ಯ ಕಾರಣ
Advertisement
ಹೃದಯಾಘಾತ ಆಗದಂತೆ ಎಚ್ಚರವಹಿಸುವುದು ಹೇಗೆ?
* ಚಿಕ್ಕಂದಿನಿಂದಲೇ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು
* ವ್ಯಾಯಾಮ ಮಾಡಬೇಕು
* ಕೊಬ್ಬಿನಾಂಶ ಇರುವ ಆಹಾರ ಸೇರಿಸಬಾರದು
* ಹೆಚ್ಚು ಉಪ್ಪಿನಾಂಶ ಇರುವ ಆಹಾರ ಸೇರಿಸಬಾರದು
* ಧೂಮಪಾನ ಮಾಡಬಾರದು
* ಮದ್ಯಪಾನ ಮಾಡಬಾರದು
* 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಗಂಡಸರು ವಾರ್ಷಿಕವಾಗಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು . ಬ್ಲಡ್ ಬ್ರೆಸರ್, ಬ್ಲಡ್ ಕೊಲೆಸ್ಟ್ರಾಲ್ ಚೆಕ್ ಮಾಡಿಸಿಕೊಳ್ಳಬೇಕು
* ಕುಟುಂಬದಲ್ಲಿ ಯಾರಿಗಾದ್ರು ಹಾರ್ಟ್ ಅಟ್ಯಾಕ್ ಆಗಿದ್ದರೆ ಎಚ್ಚರವಹಿಸಬೇಕು ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್
ಒಟ್ಟಾರೆ 80 ರಿಂದ 90 ವರ್ಷ ಬಾಳಿ ಬದುಕಬೇಕಾದ ಯುವಕರು ಕೆಟ್ಟ ಚಟ ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದ ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗುವುದು ನಿಜಕ್ಕೂ ಆತಂಕ ಪಡುವಂತಹ ವಿಚಾರವಾಗಿದೆ.