ಮಂಡ್ಯ: ಎಲ್ಲ ಸಾರಿಗೆ ಸಂಸ್ಥೆಗಳಿಂದ ವರ್ಷಕ್ಕೆ ಆರುನೂರು ಕೋಟಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಇದೇ ತಿಂಗಳು 16ರ ನಂತರ ಬಸ್ ದರ ಏರಿಕೆಯಾಗಲಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾಲ್ಕು ವಿಭಾಗಗಳಿಂದ 25 ಸಾವಿರ ಬಸ್‍ಗಳಿದ್ದು, ಸಾರಿಗೆ ಇಲಾಖೆಗೆ ನೂರಾರು ಕೋಟಿ ನಷ್ಟ ಉಂಟಾಗಿದೆ. ಆದರೆ ಒಳ್ಳೆಯ ಉದ್ದೇಶಕ್ಕಾಗಿ ಬಂದ್ ಮಾಡಲಾಗುತ್ತಿರುವುದರಿಂದ ಬಂದ್‍ಗೆ ಬೆಂಬಲ ನೀಡಿದ್ದೇವೆ. ಈ ಹಿಂದೆ ಮೋದಿ ಸರ್ಕಾರ ಬರುವ ಮುನ್ನ ವರ್ಷದ ಒಂದು ಬಾರಿ ಇಲ್ಲ ಎರಡು ಬಾರಿ ದರ ಏರಿಕೆಯಾಗುತಿತ್ತು. ಕೇಂದ್ರ ಸರ್ಕಾರ ಪ್ರತಿ ದಿನ ಪೈಸೆ ಲೆಕ್ಕದಲ್ಲಿ ತೈಲ ಬೆಲೆ ಏರಿಸುತ್ತಿದೆ. ಹೀಗಾಗಿ ಬಸ್ ದರ ಏರಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು. ನಾನು ಅಧಿಕಾರಕ್ಕೆ ಬಂದ ತಕ್ಷಣ ಬಸ್ ದರ ಏರಿಸೋದು ಬೇಡ ಎಂದು ತಡೆದಿದ್ದೆ. ಆದರೆ ಮೂರು ತಿಂಗಳಲ್ಲಿ ಐದರಿಂದ ಆರು ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ ಬಸ್ ದರ ಏರಿಸಲೇಬೇಕಾಗಿದೆ ಎಂದರು.
Advertisement
Advertisement
ಬಸ್ ದರ ಹೆಚ್ಚಳವನ್ನು ಶೇ.18 ಕ್ಕಿಂತ ಕಡಿಮೆ ಮಾಡುವ ಬಗ್ಗೆ ಈಗಲೇ ಏನು ಹೇಳಲು ಆಗಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ.
Advertisement
ಬಸ್ ದರ ಏರಿಕೆ ಬಗ್ಗೆ ಮಾಜಿ ಸಾರಿಗೆ ಸಚಿವ ಚಲುವರಾಯಸ್ವಾಮಿ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡುವುದಾಗಿ ಹೇಳಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸಿನಲ್ಲಿ ಯಾರೂ ಅಸಮಾಧಾನ ಹೊರಹಾಕಿಲ್ಲ. ಮಾಜಿ ಸಾರಿಗೆ ಸಚಿವ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದರೆ ಅದು ಕಾಂಗ್ರೆಸ್ ಪಕ್ಷದ ಹೇಳಿಕೆಯಲ್ಲ. ಹಾಗೇ ಹೇಳುವುದಾದರೆ ಯಾರಾದರೂ ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಬೇಕು. ಚಲುವರಾಯಸ್ವಾಮಿ ಸಾರಿಗೆ ಸಚಿವರಾಗಿದ್ದಾಗ ಇದ್ದ ಕಾಲಕ್ಕೂ ನಮ್ಮ ಕಾಲದ ಡಿಸೇಲ್ ಬೆಲೆಗೂ ಬಹಳ ವ್ಯತ್ಯಾಸವಿದೆ ಎಂದು ವ್ಯಂಗ್ಯವಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv