ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಅಧಿಕ ಮಳೆ ಆಗುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಗುರುವಾರ 2 ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಅಮರನಾಥ ಯಾತ್ರೆಗೆ ತೆರಳುವ ಪಹಲ್ಗಾಮ್ ಹಾಗೂ ಬಾಲ್ವಾಲ್ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಯಾವುದೇ ಯಾತ್ರಿಕರನ್ನು ಪವಿತ್ರ ಗುಹೆಯೊಳಗೆ ತೆರಳಲು ಅನುಮತಿ ನೀಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹವಮಾನ ಸುಧಾರಿಸಿದ ನಂತರ ಅಮರನಾಥ ಯಾತ್ರೆ ಪುನಾರಂಭವಾಗಲಿದೆ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್
Advertisement
Advertisement
ಜುಲೈ 8ರಂದು ನಡೆದ ಮೇಘಸ್ಫೋಟದಲ್ಲಿ 16 ಯಾತ್ರಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು. ಇದಾದ ನಂತರ ಮೂರು ದಿನಗಳ ಕಾಲ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಸೋಮವಾರ ಪಹಲ್ಗಾಮ್ ಮಾರ್ಗದ ಮೂಲಕ ಮತ್ತು ಮಂಗಳವಾರ ಬಾಲ್ಟಾಲ್ ಮಾರ್ಗದ ಮೂಲಕ ಪುನಾರಂಭವಾಗಿತ್ತು. ಇದನ್ನೂ ಓದಿ: ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ