– ಭಾರತಕ್ಕೆ 238 ರನ್‌ಗಳ ಮುನ್ನಡೆ
– 500 ವಿಕೆಟ್ ಪೂರೈಸಿ ಇತಿಹಾಸ ನಿರ್ಮಿಸಿದ ಅಶ್ವಿನ್
ರಾಜ್‌ಕೋಟ್: ಆರಂಭಿಕ ಆಟಗಾರ ಬೆನ್ ಡಕೆಟ್ ವೇಗದ ಶತಕ ನೆರವಿನಿಂದ ಇಂಗ್ಲೆಂಡ್ ತಂಡ 3ನೇ ಟೆಸ್ಟ್ನಲ್ಲಿ ಭಾರತಕ್ಕೆ (Team India) ತಿರುಗೇಟು ನೀಡುವ ಸೂಚನೆ ನೀಡಿದೆ.
Advertisement
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಓವರ್‌ಗಳಲ್ಲಿ 35 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. 238 ರನ್ ಹಿನ್ನಡೆಯೊಂದಿಗೆ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಬೆನ್ ಡಕೆಟ್ (Ben Duckett) ಮತ್ತು ಜೋ ರೂಟ್ ಶನಿವಾರ ಕ್ರೀಸ್ ಆರಂಭಿಸಲಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್ – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ
Advertisement
Advertisement
5 ವಿಕೆಟ್ಗೆ 326 ರನ್ ಗಳಿಸಿದ್ದಲ್ಲಿಂದ 2ನೇ ದಿನದಾಟ ಆರಂಭಿಸಿದ ಭಾರತ 130.5 ಓವರ್‌ಗೆ 445 ರನ್ ಗಳಿಸಿ ಆಲೌಟ್ ಆಯಿತು. ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಧ್ರುವ್ ಜುರೆಲ್ 46 ರನ್ ಗಳಿಸುವ ಮೂಲಕ ಗಮನ ಸೆಳೆದರು. ಇದರೊಂದಿಗೆ ಆರ್. ಅಶ್ವಿನ್ 37 ರನ್ ಮತ್ತು ಜಸ್ಪ್ರೀತ್ ಬುಮ್ರಾ 26 ರನ್‌ಗಳ ಕೊಡುಗೆ ನೀಡಿದರು. ಇದರೊಂದಿಗೆ ಭಾರತ 455 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದನ್ನೂ ಓದಿ: 3rd Test: ರೋಹಿತ್, ಜಡೇಜಾ ಶತಕ; ಸರ್ಫರಾಜ್ ಫಿಫ್ಟಿ – ಭಾರತ ಮೊದಲ ದಿನದಾಟದ ಅಂತ್ಯಕ್ಕೆ 326/5
Advertisement
ಡೆಕೆಟ್ ಬಿರುಸಿನ ಶತಕ:
ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಆಂಗ್ಲರ ತಂಡಕ್ಕೆ ಡೆಕೆಟ್ ಬಲ ತುಂಬಿದ್ದಾರೆ. ಮೊದಲ ಇನ್ನಿಂಗ್ಸ್‌ನ 2ನೇ ದಿನದಾಟದಲ್ಲಿ ಬಿರುಸಿನ ಶತಕ ಬಾರಿಸುವ ಮೂಲಕ ಭಾರತದ ವಿರುದ್ಧ ಗೆಲುವಿನ ವಿಶ್ವಾಸ ಮೂಡಿಸಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಡಕೆಟ್ ಭರ್ಜರಿ ಶತಕ ಬಾರಿಸಿದ್ದಾರೆ,
ಆರಂಭಿಕ ಆಟಗಾರ ಝಾಕ್ ಕ್ರಾವ್ಲಿನ್ 15 ರನ್, ಓಲೆ ಪೋಪ್ 39 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಬೆನ್ ಡಕೆಟ್ 133 ರನ್ (118 ಎಸೆತ, 21 ಬೌಂಡರಿ, 2 ಸಿಕ್ಸರ್), ಜೋ ರೂಟ್ 9 ರನ್ ಗಳಿಸಿ ಕ್ರೀಸ್ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿ ಅಲ್ಲ, ಈ ಬಾರಿಯೂ ಭಾರತದಲ್ಲೇ IPL – ಯಾವಾಗಿನಿಂದ ಶುರು?
500 ವಿಕೆಟ್ ಪಡೆದ ಸ್ಪಿನ್ ಮಾಂತ್ರಿಕ:
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಝಾಕ್ ಕ್ರಾವ್ಲಿ ಅವರನ್ನು ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ 2ನೇ ಭಾರತೀಯ, ವಿಶ್ವದ 9ನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.