ಮಡಿಕೇರಿ: ಕೊರೊನಾ ಕಾರಣದಿಂದ ಕಳೆದ ಎರಡು ತಿಂಗಳುಗಳಿಸಿದ ಸ್ಥಗಿತಗೊಂಡಿದ್ದ ದುಬಾರೆಯ ಕಾವೇರಿ ನದಿಯ ರಿವರ್ ರಾಫ್ಟಿಂಗ್(ಜಲಕ್ರೀಡೆ) ಇಂದಿನಿಸಿದ ಪುನರಾರಂಭಗೊಂಡಿದೆ. ಹಾಗೆಯೇ ವೈಟ್ ವಾಟರ್ ಗೇಮ್ ಕೂಡ ಆರಂಭಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
Advertisement
ಕೊರೊನಾ ಪ್ರಕರಣಗಳು ಇಳಿಮುಖಗೊಂಡಿದ್ದರಿಂದ ರಿವರ್ ರಾಫ್ಟಿಂಗ್‍ಗೆ ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾವೇರಿ ನದಿಯಲ್ಲಿ ನೀರಿನ ಹರಿವು ಸದ್ಯದ ಸ್ಥಿತಿಯಲ್ಲಿ ಕ್ಷೀಣವಾಗಿರುವುದರಿಂದ ಏಳು ಕಿಮೀವರೆಗಿನ ರಾಫ್ಟಿಂಗ್ ಅಸಾಧ್ಯವಾಗಿದ್ದು, ದುಬಾರೆಯ ಆವರಣದಲ್ಲಿನ ನೀರಿನಲ್ಲಿಯೇ ಸ್ಟಿಲ್ ವಾಟರ್ ಬ್ಯಾಪ್ಟಿಂಗ್ ಮಾಡಲು ಕ್ಯಾಫ್ಟಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಈಗ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್, ಬೆಲ್ಲದ್‍ಗೆ ಅಭಿನಂದನೆ ಸಲ್ಲಿಸಿದ ಜಯಮೃತ್ಯುಂಜಯ ಸ್ವಾಮೀಜಿ
Advertisement
Advertisement
ವಾರಾಂತ್ಯದ ದಿನಗಳಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಒಂದಷ್ಟು ಪ್ರಮಾಣದಲ್ಲಿ ಧಾವಿಸುತ್ತಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಇನ್ನಷ್ಟೇ ಆರಂಭವಾಗಬೇಕಿದೆ. ದುಬಾರೆ ಸಂಪರ್ಕದ ಗುಡ್ಡೆಹೊಸೂರು ರಂಗಸಮುದ್ರ ಮಾರ್ಗದಲ್ಲಿ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವುದರಿಂದ ಕೊಡಗರಹಳ್ಳಿ, ಕಂಬಿಬಾಣೆಗಾಗಿ ಚಿಕ್ಲಿಹೊಳೆ ಜಲಾಶಯದ ಮೂಲಕ ದುಬಾರೆಗೆ ತೆರಳಬೇಕಿದೆ.
Advertisement
ದುಬಾರೆಯಲ್ಲಿ 34 ಮಂದಿ ಮಾಲೀಕರಿದ್ದಾರೆ. ಈ ಕ್ರೀಡಾ ಚಟುವಟಿಕೆಯಿಂದಾಗಿ ಇಲ್ಲಿ ನೂರಕ್ಕೂ ಅಧಿಕ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಿದ್ದ ಸಂದರ್ಭದಲ್ಲಿ ಪ್ರವಾಸಿಗರ ಹಿತರಕ್ಷಣೆಯ ದಿಸೆಯಿಂದ ಕೊರೊನಾ ಸೋಂಕಿತರ ಪ್ರಮಾಣ ತಗ್ಗುವವರೆಗೂ ಜಲಕ್ರೀಡೆಯನ್ನು ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಇದನ್ನೂ ಓದಿ: ಅರ್ಚಕರಿಗೆ ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ: ಜೊಲ್ಲೆ
ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಎಲ್ಲಾ ರೀತಿಯ ಜಲಕ್ರೀಡೆ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ನದಿಗಳಲ್ಲಿ ನೈಸರ್ಗಿಕ ತೊರೆಗಳಲ್ಲಿ ಹಾಗೂ ಕೆರೆಗಳಲ್ಲಿ ನಡೆಸಲು ಅನುಮತಿಸಿದೆ. ‘ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಹಾಗೂ ಸ್ವಿಮ್ಮಿಂಗ್ ಪೂಲ್‍ಗಳಲ್ಲಿ ಕೇವಲ ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.