ಮಡಿಕೇರಿ: ಕೊಡಗಿನಲ್ಲಿ (Kodagu) ಸುರಿಯುತ್ತಿರುವ ಭಾರೀ ಮಳೆಯಿಂದ (Rain) ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಬಳಿ ಇರುವ ದುಬಾರೆ ಸಾಕಾನೆ ಶಿಬಿರಕ್ಕೆ (Dubare elephant camp) ಪ್ರವಾಸಿಗರ ಪ್ರವೇಶಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ.
ದುಬಾರೆಗೆ ಭೇಟಿ ನೀಡುವ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ತೆರಳಬೇಕಾದರೆ ಕಾವೇರಿ ನದಿ ದಾಟಿ ತೆರಳಬೇಕಿದೆ. ನದಿಗೆ ಅಡ್ಡಲಾಗಿ ಸೇತುವೆ ಇಲ್ಲದ ಕಾರಣ ಬೋಟ್‍ಗಳನ್ನು ಬಳಸಿ ಸಾಗಬೇಕಿದೆ. ಇದೀಗ ನದಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಗುರುವಾರದಿಂದ ಪ್ರವೇಶ ನಿಷೇಧಿಸಲಾಗಿದೆ. ಇದನ್ನೂ ಓದಿ: ಇಷ್ಟೆಲ್ಲಾ ಅವಮಾನ ಆದ್ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ ಅನ್ಸುತ್ತೆ: ಆರ್.ಅಶೋಕ್
ನೀರಿನ ಹರಿವು ತಗ್ಗುವವರೆಗೆ ಬೋಟಿಂಗ್ ನಿಷೇಧ ಮುಂದುವರೆಯಲಿದೆ. ಅರಣ್ಯ ಇಲಾಖೆಯ 4 ಬೋಟ್‍ಗಳ ಮೂಲಕ ಪ್ರವಾಸಿಗರನ್ನು ನದಿ ದಾಟಿಸಿ ಸಾಕಾನೆ ಶಿಬಿರಕ್ಕೆ ಕರೆದೊಯ್ದು ಮರಳಿ ಕರೆತರಲಾಗುತ್ತದೆ. ಇದೀಗ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಮೂರೇ ದಿನಗಳ ಒಳಗೆ ಸಿಕ್ಕಿಂನಲ್ಲಿ 70 ಅಡಿ ಸೇತುವೆ ನಿರ್ಮಿಸಿದ ಸೇನೆ!