ಹೈದರಾಬಾದ್: ಕಳ್ಳತನ ಮಾಡಬೇಕು ಎಂದು ನಿರ್ಧರಿಸಿದರೆ ಕಳ್ಳರು ಮಾಸ್ಟರ್ ಪ್ಲ್ಯಾನ್ ಮಾಡುತ್ತಾರೆ. ಬ್ಯಾಗ್, ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಬಂದು ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಳಿ ಸಿಕ್ಕಿಬಿಳುತ್ತಾರೆ. ಹೀಗೆ ಖತರ್ನಾಕ್ ಐಡಿಯಾವನ್ನು ಮಾಡಿ ದುಬೈನಿಂದ ಹೈದ್ರಾಬಾದ್ಗೆ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವ ಮಹಿಳೆಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಮಹಿಳೆಯೊಬ್ಬಳು ದುಬೈನಿಂದ ಈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಳು. ಮಹಿಳೆ ಕಪ್ಪು ಬಣ್ಣದ ಬುರ್ಕಾ ಧರಿಸಿದ್ದರು. ಆ ಬುರ್ಕಾದ ಮೇಲೆ ಅತ್ಯಂತ ಚೆಂದನೆಯ ಡಿಸೈನ್ ಮಾಡಲಾಗಿತ್ತು. ಈ ಡಿಸೈನ್ ಮೂಲಕವಾಗಿ ಮಹಿಳೆ ಚಿನ್ನವನ್ನು ಸಾಗಾಟ ಮಾಡುತ್ತಿದ್ದಳು. ಹೈದರಾಬಾದ್ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!
Advertisement
Advertisement
ಬರ್ಕಾ ಡಿಸೈನ್ ಹೇಗಿತ್ತು ಗೊತ್ತಾ?: ರೋಡಿಯಂ ಲೇಪನವಿರುವ ಚಿನ್ನದ ಮಣಿಗಳನ್ನು ಹಾಕಿ ಹೊಲಿಯಲಾಗಿತ್ತು. ಸುಲಭಕ್ಕೆ ಕಂಡು ಹಿಡಿಯಲು ಸಾಧ್ಯವಿಲ್ಲದಂತೆ ಸುಮಾರು 350 ಗ್ರಾಂ ತೂಕವುಳ್ಳ, 18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಣಿಗಳನ್ನು ಬುರ್ಕಾಧಾರಿ ಮಹಿಳೆ ಸಾಗಿಸುತ್ತಿದ್ದಳು. ಮಹಿಳೆಯನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.
Advertisement
Advertisement