– 7 ವರ್ಷ ಪ್ರೀತಿಸಿದವ ಸಿಗಲಿಲ್ಲ ಎಂದು ಭಯಾನಕ ಕೃತ್ಯ
– ಪ್ರಿಯಕರನ ಹಲ್ಲಿನ ಪೀಸ್ ಎಲ್ಲಾ ಸತ್ಯ ಹೇಳಿಸಿತು!
ದುಬೈ: 7 ವರ್ಷದ ಪ್ರೀತಿ ಕೈಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಯುವತಿಯೊಬ್ಬಳು ತನ್ನ ಪ್ರಿಯತಮನನ್ನೇ ಕೊಚ್ಚಿ ಕೊಂದು ಕೆಲಸದವರಿಗೆ ಬಿರಿಯಾನಿ ಮಾಡಿ ಬಡಿಸಿದ್ದಾಳೆ. ಹೌದಾ, ಹೀಗೂ ಮಾಡ್ತಾರಾ ಎಂಬ ಪ್ರಶ್ನೆ ನಿಮ್ಮ ಮನಸ್ಸು ಹೊಕ್ಕಿದ್ದರೆ ಹೌದು ಇಂಥದ್ದೊಂದು ನೈಜ ಘಟನೆ ದುಬೈಯಲ್ಲಿ ನಡೆದಿದೆ.
ಯುಎಇಯಲ್ಲಿ ನೆಲೆಸಿರುವ 30 ವರ್ಷದ ಆಸುಪಾಸಿನ ಮೊರಕ್ಕೋ ದೇಶದ ಮಹಿಳೆ ಇಂತಹ ಪೈಶಾಚಿಕ ಕೃತ್ಯ ನಡೆಸಿ ಬರೋಬ್ಬರಿ ಮೂರು ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.
Advertisement
Advertisement
ಅಷ್ಟಕ್ಕೂ ಆಗಿದ್ದೇನು?: ಇಲ್ಲಿನ ಅಲ್ ಐನ್ ಎಂಬಲ್ಲಿ ವಾಸವಾಗಿದ್ದ 30 ವರ್ಷದ ಯುವತಿ 20ರ ಆಸುಪಾಸಿನ ಯುವಕನಿಗೆ ಹಣಕಾಸಿನ ಸಹಾಯ ನೀಡಿದ್ದಳು. ಈ ಸಂಬಂಧ ಮುಂದುವರಿದು ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿಕೊಂಡಿದ್ದರು. ಆದರೆ 7 ವರ್ಷದ ಪ್ರೀತಿ ಕಳೆದ ವರ್ಷ ಮುರಿದು ಬಿದ್ದಿತ್ತು. ಇದಕ್ಕೆ ಕಾರಣ ಪ್ರಿಯಕರ ಈಕೆಯನ್ನು ಬಿಟ್ಟು ಬೇರೆಯವಳ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಇದನ್ನರಿಥ ಯುವತಿ ಆತನಿಂದ ದೂರವಾಗಿದ್ದಳು. ಆದರೆ ಆಕೆಯ ಮನದಲ್ಲಿ ಆತನ ವಂಚನೆ ಸದಾ ಕಾಲ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆಕೆ ಆತನ ಮೇಲೆ ಪ್ರತೀಕಾರಕ್ಕೆ ಪ್ಲ್ಯಾನ್ ಮಾಡಿದ್ದಳು.
Advertisement
Advertisement
ಸುಳ್ಳಿನ ಕಂತೆ ಪೋಣಿಸಿದ್ಳು!: ಕಳೆದ ಮೂರು ತಿಂಗಳಿಂದ ಯುವಕ ನಾಪತ್ತೆಯಾಗಿದ್ದ. ಈ ಬಗ್ಗೆ ಯುವಕನ ಸೋದರ ಪೊಲೀಸರಿಗೆ ದೂರು ನೀಡಿದ್ದ. ಜೊತೆಗೆ ಯುವತಿಯ ಮನೆಗೆ ಬಂದು ನನ್ನ ಸೋದರ ಎಲ್ಲಿದ್ದಾನೆ ಎಂದು ಗೊತ್ತಾ ಎಂದು ವಿಚಾರಿಸಿದ್ದಾನೆ. ಸೋದರನಿಗೆ ಬೇರೆಯವರ ಜೊತೆ ವಿವಾಹ ಗೊತ್ತಾಗಿದೆ ಎಂದು ತಿಳಿದ ತಕ್ಷಣ ನಾನು ಅವನಿಂದ ದೂರವಾಗಿದ್ದೇನೆ ಎಂದು ನಾಟಕವಾಡಿದ್ದಾಳೆ. ಆದರೂ ಯುವಕನ ಸೋದರನಿಗೆ ಆಕೆಯ ಮೇಲೆ ಸಂಶಯ ಶುರುವಾಗುತ್ತದೆ. ಹೀಗಾಗಿ ಆತ ಆಕೆಯ ಮನೆಯ ಸೂಕ್ಷ್ಮವಾಗಿ ಗಮನಿಸುತ್ತಾನೆ.
ಸುಳಿವು ನೀಡಿತ್ತು ಹಲ್ಲಿನ ಪೀಸ್!: ಹೀಗೆ ಮನೆಯಲ್ಲಿ ಪರಿಶೀಲನೆ ಮಾಡುವ ವೇಳೆ ಬ್ಲೆಂಡರ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿತ್ತು. ಇದು ಪ್ರಿಯತಮೆಯೇ ಕೊಲೆಗಾರ್ತಿ ಎನ್ನುವುದನ್ನು ಸಾಬೀತುಪಡಿಸಲು ಸಾಕಾಗಿತ್ತು. ತಕ್ಷಣ ಕೊಲೆಯಾದವನ ಸೋದರ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಂಧಿಸಿದ ಪೊಲೀಸರು ಆಕೆಯ ಮನೆಯಲ್ಲಿ ಸಿಕ್ಕಿದ್ದ ಹಲ್ಲನ್ನು ಡಿಎನ್ಎ ಟೆಸ್ಟ್ ಗೆ ಕಳಿಸಿದ್ದರು. ಈ ಪರೀಕ್ಷೆಯಲ್ಲಿ ಆ ಹಲ್ಲು ಆಕೆಯ ಪ್ರಿಯಕರನದ್ದೇ ಎಂದು ಸಾಬೀತಾಗಿದ್ದು, ಸದ್ಯ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಎನ್ಎ ಟೆಸ್ಟ್ ರಿಪೋರ್ಟ್ ಜೊತೆಗೆ ಬಂದ ಪೊಲೀಸರು ಯುವತಿಗೆ ಸಾಕ್ಷ್ಯ ನೀಡಿದಾಗ ಆಕೆ ಅಲ್ಲೇ ಕುಸಿದು ಬಿದ್ದಿದ್ದಾಳೆ, ಬಳಿಕ ಯಾವ ರೀತಿಯಲ್ಲಿ ಕೃತ್ಯ ನಡೆಸಿದೆ ಎನ್ನುವುದನ್ನು ಚಾಚೂ ತಪ್ಪದೆ ವಿವರಿಸಿದ್ದಾಳೆ.
ಯುವತಿ ಹೇಳಿದ್ದೇನು?: ನನ್ನ ಪ್ರಿಯಕರ ನನಗೆ ವಂಚಿಸಿದ ಹಿನ್ನೆಲೆಯಲ್ಲಿ ನಾನು ಈ ಕೃತ್ಯ ನಡೆಸಿದ್ದೇನೆ. ಆತನನ್ನು ಕೊಲೆ ಮಾಡಿದ ಬಳಿಕ ಮಾಂಸವನ್ನು ಪೀಸ್ ಪೀಸ್ ಮಾಡಿ ಅರೇಬಿಯನ್ ಶೈಲಿಯ ಆಹಾರವಾದ ಮಾಚ್ ಬೂಸ್ (ಬಿರಿಯಾನಿ) ಮಾಡಿದ್ದೇನೆ. ನನ್ನ ಪ್ರಿಯಕರನ ಮಾಂಸದಿಂದ ಮಾಡಿದ ಬಿರಿಯಾನಿಯನ್ನು ನಾನು ನಮ್ಮ ಮನೆ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ನೀಡಿದ್ದೇನೆ. ಅಲ್ಲದೆ ಮಾಂಸವನ್ನು ಪೀಸ್ ಮಾಡಿದ ಬಳಿಕ ಬಾಕಿ ಉಳಿದಿದ್ದ ಭಾಗಗಳನ್ನು ನಾಯಿಗೆ ಹಾಕಿದ್ದೇನೆ. ನನ್ನ ಸ್ನೇಹಿತನಿಗೆ ಹೇಳಿ ಮನೆಯನ್ನು ಕ್ಲೀನ್ ಮಾಡಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತನಿಖೆ ನಡೆಸುತ್ತಿರೋ ಪೊಲೀಸರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv