ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ (ಡಿಯು) ಸಹಾಯಕ ಪ್ರಾಧ್ಯಾಪಕರೊಬ್ಬರು ಹಿಂದೂ ದುರ್ಗಾ ದೇವತೆಯನ್ನು ಅಶ್ಲೀಲ ಪದಗಳಿಂದ ಬರೆದು ಪ್ರಕಟಿಸಿದ ಫೇಸ್‍ಬುಕ್‍ನ ಪೋಸ್ಟ್ ಇದೀಗ ವಿವಾದವನ್ನು ಸೃಷ್ಟಿಸಿದೆ.
ದೆಹಲಿಯ ದಾಯಲ್ ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಕೇದರ್ ಕುಮಾರ್ ಮಂಡಲ್ “ಭಾರತೀಯ ಪುರಾಣದಲ್ಲಿ ದುರ್ಗಾ ಅತ್ಯಂತ ವೇಶ್ಯೆ” ಎಂದು ಬರೆದಿದ್ದು, ಸೆಪ್ಟಂಬರ್ 22 ರಂದು ಸಂಜೆ ಸುಮಾರು 6.43 ಕ್ಕೆ ಪೋಸ್ಟ್ ಪ್ರಕಟವಾಗಿತ್ತು.
Advertisement
Advertisement
ಈ ಪೋಸ್ಟ್ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿರುವ ಬಿಜೆಪಿ ಅಂಗಸಂಸ್ಥೆಯಾದ ನ್ಯಾಷನಲ್ ಡೆಮೋಗ್ರಸಿ ಟೀಚರ್ಸ್ ಫ್ರಂಟ್ (ಎನ್‍ಡಿಟಿಎಫ್) ಪ್ರಾಧ್ಯಾಪಕ ಮಂಡಲ್ ವಿರುದ್ಧ ದೆಹಲಿಯ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
Advertisement
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ನ್ಯಾಷನಲ್ ಸ್ಟುಡೆಂಟ್ಸ್ ಯುನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ನಂತಹ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ದೆಹಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ತಕ್ಷಣ ಕುಮಾರ್ ಮಂಡಲ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.