ಡ್ರೈಫ್ರೂಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಡ್ರೈಫ್ರೂಟ್ಸ್ ಸೇವಿಸುತ್ತಾರೆ. ಡಯೆಟ್ ಮಾಡುವವರು, ಯೋಗ ಮಾಡುವವರು, ಜಿಮ್ ಮಾಡುವ ಪ್ರತಿಯೊಬ್ಬರು ಇದನ್ನು ತಿಂದೇ ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಡ್ರೈಫ್ರೂಟ್ಸ್ ಬರ್ಫಿ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ಖರ್ಜೂರ – 20
ಮಿಕ್ಸ್ ನಟ್ಸ್ – ಅರ್ಧ ಕಪ್
ತುಪ್ಪ – 1 ಚಮಚ
ಕೊಕೊವಾ ಪೌಡರ್ – 1 ಚಮಚ
ವೆನಿಲ್ಲಾ ಎಸೆನ್ಸ್ – ಕಾಲು ಚಮಚ
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಖರ್ಜೂರ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
* ಬಳಿಕ ಒಂದು ಪ್ಯಾನ್‌ಗೆ ನಟ್ಸ್‌ಗಳನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
* ಬಳಿಕ ಇದನ್ನು ಮಿಕ್ಸಿಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಿ. ಇದನ್ನು ಪೌಡರ್ ಮಾಡಿಕೊಳ್ಳುವ ಬದಲು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಬಹುದು.
* ಬಳಿಕ ಅದೇ ಪ್ಯಾನ್‌ಗೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ನಟ್ಸ್ ಅಥವಾ ಪೌಡರ್ ಅನ್ನು ಹಾಕಿಕೊಳ್ಳಿ.
* ಈಗ ಇದಕ್ಕೆ ಕೊಕೊ ಪೌಡರ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಬಳಿಕ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಇದನ್ನು ಒಂದು ಟ್ರೇಗೆ ಹಾಕಿಕೊಂಡು ಸಮತಟ್ಟಾಗಿ ಸವರಿಕೊಳ್ಳಿ.
* ಬಳಿಕ ಇದನ್ನು ಒಂದು ಅಲ್ಯುಮೀನಿಯಂ ಫಾಯಿಲ್ ಅಲ್ಲಿ ಹಾಕಿಕೊಂಡು ರೋಲ್ ಮಾಡಿ ಫ್ರೀಜರ್‌ನಲ್ಲಿ 2 ಗಂಟೆಗಳ ಕಾಲ ಇರಿಸಿ.
* ಈಗ ಇದನ್ನು ಫ್ರೀಜರ್‌ನಿಂದ ಹೊರತೆಗೆದು ರೌಂಡ್ ಶೇಪ್‌ನಲ್ಲಿ ಕತ್ತರಿಸಿಕೊಂಡು ಸವಿಯಲು ಕೊಡಿ.
Web Stories