ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಮನೆ ಮಗನನ್ನು ಕಳೆದುಕೊಂಡು ಅವರ ಕುಟುಂಬ ಸಂಕಟಪಡ್ತಿದ್ದಾರೆ. ಇದೀಗ ಅವರ ಕುಟುಂಬಕ್ಕೆ ಧ್ರುವ ಸರ್ಜಾ (Dhruva Sarja Fans) ಅಭಿಮಾನಿಗಳು ಧನ ಸಹಾಯ ಮಾಡಿದ್ದಾರೆ.
ರೇಣಾಕಾಸ್ವಾಮಿ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದೆ. ಅವರ ಕುಟುಂಬದ ಪರ ಧ್ರುವ ಫ್ಯಾನ್ಸ್ ಬೆಂಬಲಕ್ಕೆ ನಿಂತಿದ್ದಾರೆ. ಧ್ರುವ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ & ಟೀಮ್ ಇದೀಗ ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:Drugs Case: ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು- ಕಣ್ಣೀರಿಟ್ಟ ಸಂಜನಾ ಗಲ್ರಾನಿ
ಈ ವೇಳೆ, ನಟ ಧ್ರುವ ಸರ್ಜಾ (Dhruva Sarja) ಕೂಡ ಕರೆ ಮಾಡಿ ಮಾತನಾಡಿ, ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ. ಏನೇ ಇದ್ದರೂ ತಿಳಿಸಿ ಎಂದು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ ಧ್ರುವ ಸರ್ಜಾ.