ಮಕ್ಕಳು ಚೆಂದದ ಡ್ರೆಸ್ ತೊಟ್ಟರೆ ಸಾಕು ಮಗುವಿಗೆ ದೃಷ್ಟಿ ಆಗುತ್ತೆ ಅಂತ ಅಮ್ಮ ಹೇಳುವ ಮೊದಲು ಮಾತು. ಇನ್ನು ಮನೆ ಕಟ್ಟಿದ್ರೆ ಮುಂಭಾಗದಲ್ಲಿ ದೃಷ್ಟಿಗೊಂಬೆ ಇರಲೇಬೇಕು. ಅನಾರೋಗ್ಯಕ್ಕೆ ತುತ್ತಾದ್ರೆ ಕಾಲಿಗೆ ಕಪ್ಪು ದಾರ ಕಟ್ಟಿದ್ರೆ ಗುಣಮುಖರಾಗ್ತಾರೆ ಅನ್ನೋದು ನಂಬಿಕೆ. ಯುವತಿಯರು ಎಡಗಾಲಿಗೆ, ಯುವಕರು ಬಲಗಾಲಿಗೆ ಕಪ್ಪು ದಾರ ಕಟ್ಟಿರೋದನ್ನು ನೋಡಿರುತ್ತೇವೆ. ಪೋಷಕರ ಒತ್ತಾಯಕ್ಕೆ ದಾರ ಕಟ್ಟಿಕೊಂಡಿದ್ದೇವೆ ಅನ್ನೋದು ಬಹುತೇಕರ ಮಾತು. ದೃಷ್ಟಿದೋಷ ಎಂದರೇನು? ಕಾಲಿಗೆ ಕಪ್ಪು ದಾರ ಕಟ್ಟೋದ್ಯಾಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Advertisement
Advertisement
ಕೆಲವರ ನೇತ್ರದಿಂದ ದೃಷ್ಟಿ ಆಗುತ್ತೆ ಅನ್ನೋದು ನಂಬಿಕೆ. ಮಕ್ಕಳು ಆರೋಗ್ಯವಾಗಿದ್ದಾಗಲೂ ಹಠ ಮಾಡುತ್ತಿರುತ್ತವೆ. ಹೇಳಿದ ಮಾತನ್ನು ಕೇಳಲ್ಲ. ಸದೃಢವಾಗಿದ್ದರೂ ಮಗು ಮಾತ್ರ ಅಳೋದನ್ನು ನಿಲ್ಲಿಸಲ್ಲ. ಆಗ ಮನೆಯ ಹಿರಿಯರು ಕಪ್ಪು ದಾರವನ್ನು ಕಟ್ಟುವಂತೆ ಸೂಚಿಸುತ್ತಾರೆ. ಯಾವುದೋ ಒಂದು ದೇವಾಲಯ ಅಥವಾ ದೇವರ ಹೆಸರು ಹೇಳಿ ಮಕ್ಕಳಿಗೆ ಕಪ್ಪು ದಾರ ಕಟ್ಟುತ್ತಾರೆ.
Advertisement
ಕಾಲಿಗೆ ಕಪ್ಪುದಾರ ಕಟ್ಟೋದ್ಯಾಕೆ?
ಪ್ರತಿನಿತ್ಯ ಬಳಸುವ ದಾರಿಯಲ್ಲಿ ಅಂದ್ರೆ ಮೂರು ರಸ್ತೆಗಳು ಸೇರುವ ಕೇಂದ್ರದಲ್ಲಿ ದೃಷ್ಟಿದೋಷಗಳನ್ನು ನಿವಾರಿಸಿ ನಿಂಬೆಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಇರಿಸಿರುತ್ತಾರೆ. ನಿವಾರಿಸಿದ ವಸ್ತಗಳನ್ನು ದಾಟಿದ್ರೆ ಅದರಿಂದಾಗುವ ದುಷ್ಪರಿಣಾಮಗಳು ಮಕ್ಕಳ ಮೇಲೆ ಬೀಳದಿರಲಿ ಎಂದು ಪೋಷಕರು ಕಪ್ಪು ದಾರ ಕಟ್ಟಿಕೊಳ್ಳುವಂತೆ ಸೂಚಿಸುತ್ತಾರೆ. ಹೆಣ್ಣು ಮಕ್ಕಳು ಎಡಗಾಲಿಗೆ, ಗಂಡು ಮಕ್ಕಳು ಬಲಗಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಬೇಕು.
Advertisement
ದೃಷ್ಟಿದೋಷಕ್ಕೆ ಪರಿಹಾರ:
ಹಿತ, ಅಹಿತ, ಕ್ರೂರ ಮತ್ತು ನೀಚ ದೃಷ್ಟಿ ಎಂಬ ನಾಲ್ಕು ಬಗೆಯ ದೃಷ್ಟಿಗಳಿರುತ್ತವೆ. ಈ ದೋಷದ ನಿವಾರಣೆಗಾಗಿ ದೃಷ್ಟಿ ಗಣೇಶನನ್ನು ಆರಾಧಿಸಬೇಕು. ಹಾಗಾಗಿ ಕೆಲವರು ಮನೆ, ಅಂಗಡಿ, ವಾಹನಗಳಲ್ಲಿ ದೃಷ್ಟಿ ಗಣೇಶನ ವಿಗ್ರಹ ಅಥವಾ ಫೋಟೋ ಅಥವಾ ಸಣ್ಣದಾದ ಸ್ಟಿಕ್ಕರ್ ಹಾಕಿಕೊಂಡಿರುತ್ತಾರೆ. ದೃಷ್ಟಿ ಗಣೇಶನ ಫೋಟೋ ಹಾಕುವುದರಿಂದ ನಮ್ಮ ಬಳಿ ಬರುವಂತಹ ಕೆಟ್ಟ ದೃಷ್ಟಿ (ಬ್ಯಾಡ್ ಎನರ್ಜಿ ಅಥವಾ ನೆಗಟಿವ್ ರೇಸ್) ವಾಪಾಸ್ ಹೋಗುತ್ತದೆ ಎಂದು ಗಣೇಶ ಪುರಾಣದಲ್ಲಿ ಹೇಳಲಾಗುತ್ತದೆ.
ವ್ಯಾಪಾರ ಸ್ಥಳದಲ್ಲಿ ಅಥವಾ ಮನೆಯಲ್ಲಿ ಯಾರು ನನ್ನನ್ನು ಆರಾಧನೆ ಮಾಡುತ್ತಾರೋ ಅಲ್ಲಿಗೆ ಬರುವ ಕೆಟ್ಟ ದೃಷ್ಟಿಯನ್ನು ನಾನು ಸಂಹಾರ ಮಾಡುತ್ತೇನೆ ಎಂದು ವಿಘ್ನ ನಿವಾರಕ ಗಣೇಶ ಹೇಳುತ್ತಾನೆ ಎಂಬುವುದು ಪುರಾಣದಲ್ಲಿದೆ. ಗೃಹಪ್ರವೇಶ ಮಾಡುವ ವೇಳೆ ಕುಂಬಳಕಾಯಿ ಕಟ್ಟಲು ಕಪ್ಪು ದಾರ ಬಳಸಲಾಗುತ್ತದೆ.