ಬೆಂಗಳೂರು: ಕುಡುಕರು ನಮ್ಮ ಎಣ್ಣೆ ನಮ್ಮ ಹಕ್ಕು ಅಂತಿದ್ದಾರೆ ಎಂದು ಹೇಳುವ ಮೂಲಕ ವಿರೋಧಪಕ್ಷದ ನಾಯಕ ಆರ್. ಅಶೋಕ್ (R Ashok) ಟಾಂಗ್ ನೀಡಿದ್ದಾರೆ.
ವಿಧಾನಸಭೆಯಲ್ಲಿ (Vidhanasabha) ಇಂದು ಬಜೆಟ್ (Budget) ಮೇಲಿನ ಚರ್ಚೆಯ ವೇಳೆ ಮಾತನಾಡುತ್ತಾ, ಮದ್ಯದ ಮೇಲಿನ ದರ ಏರಿಕೆಗೆ ಮದ್ಯಪ್ರಿಯರು ಸಿಟ್ಟಾಗಿದ್ದಾರೆ. ಕುಡುಕರು ಪ್ರತಿಭಟನೆ ಮಾಡಿದ್ದೇ ನಾನು ನೋಡಿರಲಿಲ್ಲ. ಆದರೆ ಕುಡುಕರು ಕೂಡ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಎಂದರು.
ನಮ್ಮ ಎಣ್ಣೆ ದುಡ್ಡು ಎಲ್ಲಿ ಹೋಗ್ತಿದೆ ಎಂದು ಕೇಳುತ್ತಿದ್ದಾರೆ. ಈ ವೇಳೆ ಅದನ್ನು ಅನುಭವಿಸಿ ಕೇಳಿದರೆ ಅರ್ಥ ಆಗುತ್ತದೆ. ನೀವು ಅದನ್ನು ಅನುಭವಿಸಿರಲ್ಲ. ಆದರೆ ಯತ್ನಾಳ್ ಗೆ ಅನುಭವ ಇರಬಹುದು ಎಂದ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು. ಆಗ ನನಗೆ ಯಾಕಪ್ಪ ಹೇಳ್ತೀಯಾ ಎಂದು ನಕ್ಕು ಬಸನಗೌಡ ಪಾಟೀಲ್ ಯತ್ನಾಳ್ ಕುಳಿತರು. ಇದನ್ನೂ ಓದಿ: ಕಿಕ್ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್ ಟಾರ್ಗೆಟ್: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?
ಈ ಬಾರಿಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ (Excise Department) ಬರೋಬ್ಬರಿ 38,525 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ. ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಿದ್ದರು. ಈ ಬಜೆಟ್‌ಗೆ ಹೋಲಿಸಿದರೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ ತೆರಿಗೆ ಸಂಗ್ರಹ ಗುರಿ 2,525 ಕೋಟಿ ರೂ. ಏರಿಕೆಯಾಗಿದೆ.
ಬಜೆಟ್‌ನಲ್ಲಿ ಏನಿತ್ತು?: ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲಾಗುವುದು. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ ದೇವನಹಳ್ಳಿಗೆ ಮೆಟ್ರೋ ರೈಲು!
ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುವುದು ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ.