– ಲಾಟಿ ರುಚಿ ತೋರಿಸಿದ ಪೊಲೀಸರೇ ತಬ್ಬಿಬ್ಬು
ಕಾರವಾರ: ಕುಡಿದ ಮತ್ತಿನಲ್ಲಿ ಅಧಿಕಾರಿಗಳ ಮೇಲೆ ಕಲ್ಲು, ಸಿಮೆಂಟ್‍ಶೀಟ್ ತುಂಡು ಬಿಸಾಕಲು ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಮನೆಯ ಹೊರಗೆ ಬಂದು ಕುಡಿದು ಬರಿ ಮೈಯಲ್ಲಿ ಓಡಾಡುತ್ತಾ ಕೆಟ್ಟ ವರ್ತನೆ ತೋರುತ್ತಿದ್ದ ವ್ಯಕ್ತಿಗೆ ಅಧಿಕಾರಿಗಳು ಮನೆಯೊಳಗೆ ತೆರಳಲು ಸೂಚನೆ ನೀಡಿದ್ದಾರೆ. ಇದಕ್ಕೆ ಕುಪಿತಗೊಂಡ ವ್ಯಕ್ತಿ ಮನೆಯ ಗೇಟ್ ಮುಂದೆ ನಿಂತು ಅಧಿಕಾರಿಗಳ ಜೊತೆ ಜಗಳಕ್ಕೆ ನಿಂತು ಕಲ್ಲು ಹಾಗೂ ಸಿಮೆಂಟ್‍ಶೀಟ್ ತುಂಡು ಅಧಿಕಾರಿಗಳ ಮೇಲೆ ಎಸೆಯಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಪೇದೆ ಎರಡೇಟು ಬಿಟ್ಟರು ಮತ್ತೆ ಮತ್ತೆ ಎದೆ ಕೊಟ್ಟು ಮುಂದೆ ಬಂದ ಕುಡುಕ ಅಸಭ್ಯ ವರ್ತನೆ ತೋರಿದ್ದಾನೆ.
Advertisement
Advertisement
ಇಡೀ ಭಾರತವೇ ಬಂದ್ ಇದೆ. ಹೀಗಾಗಿ ಜನರಿಗೆ ಆಹಾರ ಪದಾರ್ಥ ಸಿಗುವುದೇ ಕಷ್ಟಕರವಾಗಿದ್ದು, ಅಂತಹದರಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ರು ಮದ್ಯ ಸೇವಿಸಿಸ ಕುಡುಕ ಅನುಚಿತ ವರ್ತನೆ ತೋರಿದ್ದಾನೆ. ಈತನನ್ನು ನಂತರ ಸಮಾಧಾನಪಡಿಸಿ ಮನೆಯವರೇ ಕರೆದುಕೊಂಡು ಹೋಗಿದ್ದಾರೆ.