-ಎಷ್ಟಾದ್ರೂ ಹೊಡಿರಿ, ನನಗೇನು ಆಗಲ್ಲ
ಬೆಂಗಳೂರು: ಕೊರೊನಾ ನಮಗೆ ಚೀನಾದಿಂದ ಬಂದಿದ್ದು, ಆ ದೇಶವನ್ನು ನಾನು ಸುಮ್ಮನೆ ಬಿಡಲ್ಲ ಎಂದು ಕುಡುಕನೊಬ್ಬ ಬೆಳ್ಳಂಬೆಳಗ್ಗೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ರಂಪಾಟ ಮಾಡಿದ್ದಾನೆ.
ಮದ್ಯದಂಗಡಿ ಮುಂದೆ ರಂಪಾಟ ಮಾಡುತ್ತಿದ್ದ ಕುಡುಕನಿಗೆ ಮನೆಗೆ ಹೋಗುವಂತೆ ಪೊಲೀಸರು ಹೇಳಿದ್ದಾರೆ. ಮಾತು ಕೇಳದಿದ್ದಾಗ ಪೊಲೀಸರು ಲಾಠಿ ರುಚಿ ತೋರಿಸಿದಾಗ ಎಷ್ಟಾದ್ರು ಹೊಡೀರಿ ನನಗೇನು ಆಗಲ್ಲ ಎಂದು ಮೊಂಡುತನ ಪ್ರದರ್ಶನ ಮಾಡಿದ್ದಾನೆ. ನಾನು ಕೊರೊನಾ ವಿರುದ್ಧ ಫೈಟ್ ಮಾಡ್ತೀನಿ. ಚೀನಾವನ್ನು ಸುಮ್ಮನೆ ಬಿಡಲ್ಲ ಎಂದು ಕೂಗಾಡಿದ್ದಾನೆ. ಕೊನೆಗೆ ಪೊಲೀಸರು ಆತನನ್ನು ಅಂಗಡಿ ಮುಂದೆಯಿಂದ ಬೇರೆಡೆ ಕಳುಹಿಸಿದ್ದಾರೆ.
ಸೋಮವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಿನ್ನೆ ಒಂದೇ ಸರ್ಕಾರದ ಬೊಕ್ಕಸಕ್ಕೆ 45 ಕೋಟಿ ರೂ. ಸಂಗ್ರಹವಾಗಿದೆ. 40 ದಿನಗಳಿಂದ ಮದ್ಯದಿಂದ ದೂರವಿದ್ದ ಗುಂಡೈಕ್ಳು ಬೆಳಗ್ಗೆಯಿಂದಲೇ ಅಂಗಡಿಗಳ ಮುಂದೆ ಕ್ಯೂ ಹಚ್ಚಿದ್ದರು. ಮದ್ಯ ಸಿಕ್ಕಿದ್ದೇ ತಡ ರಸ್ತೆಯಲ್ಲಿಯೇ ಗಟಗಟನೆ ಕುಡಿದು ಬಾಯಿರಿಸಿಕೊಂಡು ಹಾಡು ಹೇಳುತ್ತಾ ಹೆಜ್ಜೆ ಹಾಕಿದ್ದರು.