ದಾವಣಗೆರೆ: ರಾಜ್ಯಾದ್ಯಂತ ಬಂದ್ ಬಿಸಿ ಇದ್ದರೆ, ಇದರ ನಡುವೆ ದಾವಣಗೆರೆಯಲ್ಲಿ ಕುಡುಕನ ಅವಾಂತರ ಅಲ್ಲಿ ನೆರೆದ ಸಾರ್ವಜನಿಕರಿಗೆ ಮನೋರಂಜನೆ ನೀಡಿತ್ತು.
ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಎದುರು ಕುಡುಕ ಮಹಾಶಯನೊಬ್ಬ, ಬಸ್‍ಗಾಗಿ ಕಾಯುತ್ತಿದ್ದ ಪ್ರಯಣಿಕರಿಗೆ ಕಿರಿಕ್ ಮಾಡಿ ಅವಾಂತರ ಸೃಷ್ಟಿಸಿದ್ದಾನೆ. ಬಂದ್ ಇರೋದ್ರಿಂದ ಬಸ್ ಸಿಗದೆ ಟೆನ್ಷನ್ ನಲ್ಲಿದ್ದ ಪ್ರಯಾಣಿಕರ ಬಳಿ ಹೋಗಿ ಅವರನ್ನು ಎಳೆದಾಡಿ ಟವಲ್ ಕಿತ್ತುಕೊಳ್ಳುವುದು, ಅಪ್ಪಿಕೊಳ್ಳುವುದನ್ನು ಮಾಡಿದ್ದಾನೆ.
ದಾವಣಗೆರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಅವಾಂತರ ನಡೆದಿದ್ದು, ಮದ್ಯವ್ಯಸನಿ ಬುಧವಾರ ರಾತ್ರಿ ಕಂಠಪೂರ್ತಿ ಕುಡಿದು ಮಲಗಿದ್ದನು. ಪ್ರತಿಭಟನಾಕಾರರು ಎಬ್ಬಿಸಿದ ಬಳಿಕ ವ್ಯಕ್ತಿ ಕಣ್ತೆರೆದಿದ್ದಾನೆ. ಒಂದು ಕಡೆ ಮನೋರಂಜನೆಯಾದರೆ, ಮತ್ತೊಂದು ಕಡೆ ಈತನ ವರ್ತನೆಯಿಂದ ಕೆಲವರಿಗೆ ಕಿರಿಕಿರಿ ಉಂಟಾಗಿದೆ.
ನಂತರ ಪೊಲೀಸರು ಬಂದು ಕುಡುಕನನ್ನು ದಬಾಯಿಸಿ ಆಟೋ ಹತ್ತಿಸಿ ಕಳುಹಿಸಿದ್ದಾರೆ.