ಬೆಂಗಳೂರು: ಮಧ್ಯರಾತ್ರಿ ಯುವತಿಯೊಬ್ಬಳು ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ಬಿದ್ದು ಒದ್ದಾಡಿದ ಘಟನೆ ನಗರದ ಬಿಟಿಎಂ ಲೇಔಟ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ವಿದೇಶಿ ಮಹಿಳೆ ಭಾನುವಾರ ರಾತ್ರಿ ಬಿಟಿಎಂ ಲೇಔಟ್ ನಲ್ಲಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ರಂಪಾಟ ಮಾಡಿದ್ದಾಳೆ. ನಶೆ ಇಳಿಯುವ ತನಕ ಯುವತಿ ರಸ್ತೆಯ ಫುಟ್ಪಾತ್ ನಲ್ಲಿ ಮಲಗಿದ್ದಾಳೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.
ಯುವತಿಯ ರಂಪಾಟದಿಂದಾಗಿ ಮನೆಯಲ್ಲಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಬಿಟಿಎಂ ಲೇಔಟ್ ನಿವಾಸಿಗಳು ದೂರಿದ್ದಾರೆ. ಕೊನೆಗೆ ನಶೆ ಇಳಿದ ಬಳಿಕ ಯುವತಿ ಹಿಂದುರುಗಿದ್ದಾಳೆ.