-ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಈ ಕೃತ್ಯದ ಪ್ರಮುಖ ಆರೋಪಿ
ಬೆಂಗಳೂರು: ನಗರದ ಹೊಂಗಸಂದ್ರ (Hongasandra) ಬಳಿಯ ಗಾರೆಪಾಳ್ಯ ರಸ್ತೆಯಲ್ಲಿ ಓರ್ವ ರೌಡಿಶೀಟರ್ ಕುಡಿದ ಮತ್ತಿನಲ್ಲಿ 18ಕ್ಕೂ ಹೆಚ್ಚು ವಾಹನಗಳ ಗಾಜನ್ನು ಪುಡಿ ಮಾಡಿ ದಾಂಧಲೆ ನಡೆಸಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ
ಇತ್ತೀಚಿಗೆ ಬೆಂಗಳೂರಿನ (Benagluru) ಹಲವೆಡೆ ಪುಡಿ ರೌಡಿಗಳ ದಾಂಧಲೆ ಹೆಚ್ಚುತ್ತಲೆ ಇದೆ. ಹವಾ ಮಾಡಬೇಕೆಂಬ ಉದ್ದೇಶದಿಂದ ಅಟ್ಟಹಾಸ ಮೆರೆಯುತ್ತಿದ್ದಾರೆ. ಸೋಮವಾರ ಬೆಳಗಿನ ಜಾವ 3ರ ಸುಮಾರಿಗೆ ರೌಡಿಶೀಟರ್ ಸೇರಿ ಇನ್ನಿತರರು ಹೊಂಗಸಂದ್ರದ ಜನರನ್ನು ಬೆದರಿಸಲು ಅಲ್ಲಿದ್ದ 4 ಆಟೋ, 10 ಕಾರು ಮತ್ತು ಗೂಡ್ಸ್ ವಾಹನಗಳ ಗಾಜನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದು ಪುಡಿ ಮಾಡಿದ್ದಾರೆ.ಇದನ್ನೂ ಓದಿ: ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು
ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ (Bommanahalli) ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆಪ್ತ ರೌಡಿಶೀಟರ್ ಸೋಮಶೇಖರ್ ಈ ಕೃತ್ಯದ ಪ್ರಮುಖ ಆರೋಪಿ. ಸೋಮಶೇಖರ್ ಏರಿಯಾದಲ್ಲಿ ಹವಾ ಮಾಡೋಕೆ ಈಗಾಗಲೇ ಸಾಕಷ್ಟು ಜನರ ಬಳಿ ಕಿರಿಕ್ ಮಾಡಿಕೊಂಡಿದ್ದಾನೆ. ಜೊತೆಗೆ ಯುವಕರಿಗೆ ಕಾಲ್ ಮಾಡಿ ಆವಾಜ್ ಹಾಕುವುದು, ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದಕ್ಕೆ ಧಮ್ಕಿ ಹಾಕುವುದು, ಹೀಗೆ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕುಡುಪು ಮೈದಾನದಲ್ಲಿ ಹತ್ಯೆಯಾಗಿದ್ದ ಅಶ್ರಫ್ ಕುಟುಂಬಸ್ಥರ ಭೇಟಿಯಾದ ರಾಜ್ಯ ಕಾಂಗ್ರೆಸ್ ನಿಯೋಗ