ಮೈಸೂರು: ಜಾತ್ರೆ ನಡೆಯುತ್ತಿದ್ದ ವೇಳೆ ಪೊಲೀಸ್ ಪೇದೆಯೋರ್ವ ಕುಡಿದ ಮತ್ತಿನಲ್ಲಿ ದೌಲತ್ತು ತೋರಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಜಿಲ್ಲೆಯ ಸುತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕೌವಲಂದೆ ಪೊಲೀಸ್ ಠಾಣೆಯ ಪೇದೆ ಮಹದೇವಸ್ವಾಮಿ ಇಂತಹ ದುರ್ವತನೆ ತೋರಿದ್ದಾರೆ. ಜಾತ್ರೆಯಲ್ಲಿ ಕುಡಿದು ಕರ್ತವ್ಯಕ್ಕೆ ಬಂದ ಪೇದೆ ಮಹದೇವಸ್ವಾಮಿ ಕ್ಯಾಂಟೀನ್‍ನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಊಟ ಖಾಲಿಯಾಗಿದೆ ಟೀ ಇದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ಉತ್ತರಕ್ಕೆ ಕೋಪಗೊಂಡ ಪೇದೆ ಹೋಟೆಲ್‍ನಲ್ಲಿದ್ದ ಟೀ ಫ್ಲಾಸ್ಕ್ ಒಡೆದು ರೋಷಾವೇಷ ಪ್ರದರ್ಶಿಸಿದ್ದಾರೆ. ದೇವರ ಜಾತ್ರೆಗೆ ಬಂದ ಪೊಲೀಸರೇ ಈ ರೀತಿ ಬೇಜವಾಬ್ದಾರಿ ವರ್ತನೆ ಮೆರೆದರೆ ಹೇಗೆ ಎಂದು ಸ್ಥಳೀಯರು ಪೇದೆ ವಿರುದ್ಧ ಗರಂ ಆಗಿದ್ದಾರೆ.
Advertisement
Advertisement
ನಂತರ ಕಾರಿನಲ್ಲಿ ಕುಳಿತ ಮಹದೇವಸ್ವಾಮಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಪೇದೆಯ ಕಾರು ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಗು ಕೈಮುಗಿದು ಕ್ಷಮೆಯಾಚಿಸಿದ ಬಳಿಕ ಪೇದೆ ಮಹದೇವಸ್ವಾಮಿಯನ್ನು ಜನರು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv