ಮುಂಬೈ: ವ್ಯಕ್ತಿಯೊಬ್ಬ ಎಣ್ಣೆ (Alcohol) ಏಟಲ್ಲಿ ತಾನು ಮೂರು ದಶಕಗಳ ಹಿಂದೆ ಮಾಡಿದ ಜೋಡಿ ಕೊಲೆ ಹಾಗೂ ಸುಲಿಗೆ ಕುರಿತು ಬಾಯ್ಬಿಟ್ಟ ಅಚ್ಚರಿಯ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ.
ವ್ಯಕ್ತಿಯನ್ನು ಅವಿನಾಶ್ ಪವಾರ್(49) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು (Mumbai Crime Branch Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಕುಡಿದ ಮತ್ತಲ್ಲಿ ಸತ್ಯ ಕಕ್ಕಿದ!: ಸ್ನೇಹಿತರ ಜೊತೆ ಪಾರ್ಟಿ ಮಾಡುವ ವೇಳೆ ಅವಿನಾಶ್ ಕಂಠಪೂರ್ತಿ ಕುಡಿದಿದ್ದನು. ತಾನು ಪೊಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ ಎಂಬ ಭಂಡ ಧೈರ್ಯದ ಮೇಲೆ 30 ವರ್ಷಗಳ ಹಿಂದೆ ಮಾಡಿದ್ದ ತಾನು ಜೋಡಿ ಕೊಲೆ ಹಾಗೂ ಸುಲಿಗೆಯ ಬಗ್ಗೆ ಹೇಳಿಕೊಂಡಿದ್ದಾನೆ. ಇದನ್ನು ಕೇಳಿಸಿಕೊಂಡ ಆಪ್ತನೋರ್ವ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ದಯಾ ನಾಯಕ್ ಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವಿನಾಶ್ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.
Advertisement
Advertisement
ಪ್ರಕರಣದ ಕುರಿತು ಮುಂಬೈ ಕ್ರೈಂ ಬ್ರಾಂಚ್ ಡಿಸಿಪಿ ರಾಜ್ ತಿಲಕ್ ರೋಶನ್ ಪ್ರತಿಕ್ರಿಯಿಸಿ, ಬಂಧಿತ ಆರೋಪಿ 30 ವರ್ಷಗಳ ಹಿಂದೆ ಕೊಲೆಯಾದ ದಂಪತಿ ಮನೆಯ ಸ್ವಲ್ಪ ದೂರದಲ್ಲಿ ಅಂಗಡಿ ನಡೆಸುತ್ತಿದ್ದನು. ದಂಪತಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದನು. ಇದೀಗ ಕುಡಿದ ಮತ್ತಿನಲ್ಲಿ ಆತ ಕೊಲೆ ಹಾಗೂ ಸುಲಿಗೆ ಮಾಡಿದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ನಮಗೆ ಅವನ ಆಪ್ತರು ತಿಳಿಸಿದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದರು. ಇದನ್ನೂ ಓದಿ: ಹೆಡ್ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು
Advertisement
ದಂಪತಿ ಕೊಲೆ: 1993ರ ಅಕ್ಟೋಬರ್ ತಿಂಗಳಲ್ಲಿ ಪುಣೆಯ ಲೋನಾವಾಲಾದಲ್ಲಿರುವ ಮನೆಯೊಂದರಲ್ಲಿ ಅವಿನಾಶ್ ಪವಾರ್ ಹಾಗೂ ಆತನ ಇಬ್ಬರು ಸ್ನೇಹಿತರು ಕಳ್ಳತನ ಮಾಡುವ ಸಂದರ್ಭದಲ್ಲಿ ದಂಪತಿಯನ್ನು ಕೊಲೆ ಮಾಡಿದ್ದರು. ಬಳಿಕ ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಅವಿನಾಶ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ. ಕೆಲ ವರ್ಷಗಳ ಬಳಿಕ ಮಹಾರಾಷ್ಟ್ರದ ಔರಂಗಬಾದ್ಗೆ ಮರಳಿದ ಈತ, ಅಮಿತ್ ಪವಾರ್ ಎಂಬ ಹೆಸರಲ್ಲಿ ಚಾಲನಾ ಪರವಾನಗಿಯನ್ನು ಪಡೆದನು. ನಂತರ ಮಹಾರಾಷ್ಟ್ರದಲ್ಲಿ ನಗರದಿಂದ ನಗರಕ್ಕೆ ವಲಸೆ ಹೋಗುತ್ತಾ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ಬಂದು ನೆಲೆಸಿದ್ದನು.