ಮೈಸೂರು: ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ಕುಳಿತ ಪಾನಮತ್ತನೊಬ್ಬ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟುಮಾಡಿದ ಘಟನೆ ಮೈಸೂರು ನಗರದಲ್ಲಿ ನಡೆದಿದೆ.
ಕೆ.ಜಿ. ಕೊಪ್ಪಲಿನ ರೈಲ್ವೇ ಸೇತುವೆ ಬಳಿ ವೃತ್ತದ ಮಧ್ಯೆ ಕುಳಿತು ಸಾರ್ವಜನಿಕರಿಗೆ ಕಿರಿಕಿರಿ ಮಾಡಿದ್ದಾನೆ. ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂಗಾರ್ಡ್ ಕುಡುಕನನ್ನು ಕದಲಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಆ ಕುಡುಕ ವಾಹನ ಸಂಚಾರಕ್ಕೆ ಅಡ್ಡಿಯಾದರೂ ಹೋಂ ಗಾರ್ಡ್ ಮನವಿಗೆ ಸ್ಪಂದಿಸದೆ ಕಿರಿಕಿರಿ ಮುಂದುವರಿಸಿದ್ದಾನೆ.
Advertisement
ಸುಮಾರು ಅರ್ಧಗಂಟೆ ಕಾಲ ಇದೇ ಸನ್ನಿವೇಶವನ್ನು ನಿರ್ಮಾಣ ಮಾಡಿದ್ದಾನೆ. ಬಳಿಕ ಕೆಲ ಸ್ಥಳೀಯ ಯುವಕರು ಬಂದು ಕುಡುಕನನ್ನು ಸ್ಥಳದಿಂದ ಕದಲಿಸಲು ಯತ್ನಿಸಿದ್ದಾರೆ. ಆದರು ಆತ ಕದಲಿಲ್ಲ. ನಂತರ ಯುವಕರು ಬಲವಂತವಾಗಿ ಸ್ಥಳದಿಂದ ಎಳೆದು ರಸ್ತೆಯಿಂದ ಹೊರ ಕರೆದುಕೊಂಡು ಹೋಗಿದ್ದಾರೆ. ಈ ಕುಡುಕನ ಹಾವಳಿಯಿಂದ ಕೆಲಕಾಲ ವಾಹನ ಸವಾರರಿಗೆ ಕಿರಿಕಿರಿಯಾಗಿತ್ತು.
Advertisement